
ಹೈಫು ಜಾಗೃತಿ ನಟಿ ದೀಪಿಕಾ ದಾಸ್ ಚಾಲನೆ
ಬೆಂಗಳೂರು: ಮ್ಯಾಕ್ ಕ್ಲಿನಿಕ್ನಲ್ಲಿ ಹೈಫು ಜಾಗೃತಿ ಅಭಿಯಾನ ಆರಂಭವಾಗಿದ್ದು, ನಟಿ ದೀಪಿಕಾ ದಾಸ್ ಚಾಲನೆ ನೀಡಿದರು.
ಯಾವುದೇ ಶಸ್ತ್ರಚಿಕಿತ್ಸೆ ಹಾಗೂ ಚುಚ್ಚುಮದ್ದು ಇಲ್ಲದೇ ಸೌಂದರ್ಯ ಚಿಕಿತ್ಸೆ ನೀಡಬಲ್ಲ ಹೈಫು ಯಂತ್ರದ ಕುರಿತು ಆಯೋಜಿಸಿದ್ದ ಉಚಿತ ಜಾಗೃತಿ ಕಾರ್ಯಕ್ರಮಕ್ಕೆ ನಟಿ ದೀಪಿಕಾ ದಾಸ್ ಚಾಲನೆ ನೀಡಿದರು.
ಜಯನಗರದ ಮ್ಯಾಕ್ (ಎಂ.ಎ.ಎ.ಸಿ) ಕ್ಲಿನಿಕ್ನಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಹೈಫು ಯಂತ್ರದ ಕುರಿತು ಉಚಿತವಾಗಿ ಮಾಹಿತಿ ನೀಡಲಾಯಿತು.
"ಚರ್ಮ ಸುಕ್ಕುಗಟ್ಟುವಿಕೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ಚುಚ್ಚುಮದ್ದುಗಳ ಬಳಕೆ ಇಲ್ಲದೇ ಲೇಸರ್ ತಂತ್ರಜ್ಞಾನದ ಮೂಲಕ ಹೈಫು ಯಂತ್ರವನ್ನು ಬಳಸಿ ಚಿಕಿತ್ಸೆ ನೀಡಬಹುದು' ಎಂದು ಮ್ಯಾಕ್ ಕ್ಲಿನಿಕ್ ಅಧ್ಯಕ್ಷೆ ನೀಮಾ ಎನ್.ನಾಯರ್ ಹೇಳಿದರು.
"ಸೌಂದರ್ಯ ಚಿಕಿತ್ಸೆಯನ್ನು ಪಡೆಯುವಾಗ ಹೆಚ್ಚಿನ ಜನರಿಗೆ ಚುಚ್ಚುಮದ್ದುಗಳ ಭಯ ಇರುತ್ತದೆ. ಅಂತವರು ಹೈಫು ಯಂತ್ರದ ನೆರವಿನಿಂದ ಚಿಕಿತ್ಸೆ ಪಡೆಯಬಹುದು' ಎಂದು ನಟಿ ದೀಪಿಕಾ ದಾಸ್ ಹೇಳಿದರು.
ಸಲಹೆ ಹಾಗೂ ಚಿಕಿತ್ಸೆಗಾಗಿ: 9148560032ಗೆ ಕರೆ ಮಾಡಿ.