ರಾಮಮಂದಿರ ನಿರ್ಮಾಣಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ 25 ಲಕ್ಷ ರೂ. ದೇಣಿಗೆ
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮಮಂದಿರಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸ್ಟ್ಗೆ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಧರ್ಮಸ್ತಳ ಧರ್ಮಾಧಿಕಾರಿ ಡಿ ವಿ ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.
Published: 13th January 2021 07:17 PM | Last Updated: 13th January 2021 07:26 PM | A+A A-

ಧರ್ಮಸ್ಥಳ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮಮಂದಿರಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸ್ಟ್ಗೆ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಧರ್ಮಸ್ತಳ ಧರ್ಮಾಧಿಕಾರಿ ಡಿ ವಿ ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷಗಳ ನಂತರ ದೇವಾಲಯ ನಿರ್ಮಾಣಕ್ಕಿದ್ದ ದೊಡ್ಡ ಅಡ್ಡಿ ನಿವಾರಣೆಯಾಗಿದೆ. ಈ ಬಾರಿ ಶ್ರೀ ರಾಮ ಮಂದಿರದ ನಿರ್ಮಾಣ ನಿಶ್ಚಿತ. ಪೇಜಾವರ ವಿಶ್ವೇಶತೀರ್ಥರ ಸ್ಮರಣಾರ್ಥ ಮತ್ತು ಅವರ ಆಶಯವನ್ನು ಪೂರ್ಣಗೊಳಿಸಲು ನಾವು 25 ಲಕ್ಷ ರೂ. ದೇಣಿಗೆ ನೀಡುತ್ತೇವೆ ಮತ್ತು ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ಒದಗಿಸಲಿದ್ದೇವೆ ಎಂದು ಅವರು ಹೇಳಿದರು.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗೆ ಜಾಗತಿಕ ನಿಧಿಸಂಗ್ರಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿ ಶ್ರೀ ರಾಮ ಜನ್ಮಬೂಮಿ ತೀರ್ಥಕ್ಷೇತದ ಕುರಿತ ಸಾಹಿತ್ಯ ಬಿಡುಗಡೆ ಮಾಡಿದರು.