ಸಚಿವ ಸ್ಥಾನ ಬಿಟ್ಟ ಎಚ್ ನಾಗೇಶ್ ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ!

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು 7 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು ಅಬಕಾರಿ ಸಚಿವರಾಗಿದ್ದ ಎಚ್ ನಾಗೇಶ್ ರಿಂದ ರಾಜಿನಾಮೆ ಪಡೆಯಲಾಗಿತ್ತು. 

Published: 13th January 2021 08:41 PM  |   Last Updated: 13th January 2021 08:42 PM   |  A+A-


H. Nagesh1

ಹೆಚ್. ನಾಗೇಶ್

Posted By : Vishwanath S
Source : Online Desk

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು 7 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು ಅಬಕಾರಿ ಸಚಿವರಾಗಿದ್ದ ಎಚ್ ನಾಗೇಶ್ ರಿಂದ ರಾಜಿನಾಮೆ ಪಡೆಯಲಾಗಿತ್ತು. 

ಸಚಿವ ಸ್ಥಾನದಿಂದ ಕೊಕ್ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ಎಚ್ ನಾಗೇಶ್ ಅವರನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಎಚ್ ನಾಗೇಶ್ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. 

ಇನ್ನು ನಿಗಮದ ಹಾಲಿ ಅಧ್ಯಕ್ಷರಾಗಿದ್ದ ಎಸ್. ಮುನಿಕೃಷ್ಣ ಅವರನ್ನು ಮೇ|| ಮಾರುಕಟ್ಟೆ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್. ಬೆಂಗಳೂರು ಇದರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp