ಕೋವಿಡ್-19: ರಾಜ್ಯಕ್ಕೆ 20 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬುಧವಾರ ಆಗಮನ!
ಇಡೀ ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದ ಕೊರೋನಾ ಲಸಿಕೆ ಅಂತೂ ರಾಜ್ಯ ತಲುಪಿದೆ. ಮಂಗಳವಾರ 6,47,500 ಡೋಸ್ ನಷ್ಟು ಲಸಿಕೆಯುಳ್ಳ ಕೋವಿಶೀಲ್ಡ್'ನ ವಯಲ್ಸ್ ಬೆಂಗಳೂರು ತಲುಪಿದ್ದು. ಇದೀಗ ಭಾರತ್ ಬಯೋಟೆಕ್'ನ ಕೊವ್ಯಾಕ್ಸಿನ್'ನ 40,000 ಡೋಸ್ ಲಸಿಕೆಗಳ ಸ್ವಾಗತಿಸಲು ರಾಜ್ಯ ಸಜ್ಜುಗೊಂಡಿದೆ.
Published: 13th January 2021 12:37 PM | Last Updated: 13th January 2021 01:31 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇಡೀ ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದ ಕೊರೋನಾ ಲಸಿಕೆ ಅಂತೂ ರಾಜ್ಯ ತಲುಪಿದೆ. ಮಂಗಳವಾರ 6,47,500 ಡೋಸ್ ನಷ್ಟು ಲಸಿಕೆಯುಳ್ಳ ಕೋವಿಶೀಲ್ಡ್'ನ ವಯಲ್ಸ್ ಬೆಂಗಳೂರು ತಲುಪಿದ್ದು. ಇದೀಗ ಭಾರತ್ ಬಯೋಟೆಕ್'ನ ಕೊವ್ಯಾಕ್ಸಿನ್'ನ 40,000 ಡೋಸ್ ಲಸಿಕೆಗಳ ಸ್ವಾಗತಿಸಲು ರಾಜ್ಯ ಸಜ್ಜುಗೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್ ಅವರು, ರಾಜ್ಯಕ್ಕೆ ಕೋವ್ಯಾಕ್ಸಿನ್ 40,000 ಲಸಿಕೆ ಡೋಸ್ ಗಳು ಆಗಮಿಸಲಿವೆ. ಇದರಲ್ಲಿ 20,000 ಡೋಸ್ ಲಸಿಕೆಗಳು ಬುಧವಾರ ಆಗಮಿಸಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗಳನ್ನು ಕಳುಹಿಸಿದ್ದು, ಇದನ್ನು ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಎರಡೂ ಲಸಿಕೆಗಳೂ ಆಗಮಿಸುತ್ತಿದ್ದು, ಎರಡು ಲಸಿಕೆಗಳಲ್ಲಿ ಯಾವ ಯಾವ ವಿಭಾಗದ ಜನರಿಗೆ ಯಾವ ಲಸಿಕೆಗಳನ್ನು ನೀಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರು ಮಾತನಾಡಿ, ಯಾವ ಜಿಲ್ಲೆಗಳಿಗೆ ಎಷ್ಟು ಪ್ರಮಾಣದ ಲಸಿಕೆಗಳನ್ನು ನೀಡಲಾಗುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆರೋಗ್ಯ ಕಾರ್ಯಕರ್ತರ ಲಸಿಕೆಗಳ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಆದರೆ, ಸಾರ್ವಜನಿಕರಿಗೆ ನೀಡಲಾಗುವ ಲಸಿಕೆಗಳ ವೆಚ್ಚದ ಕುರಿತು ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಕೊವಾಕ್ಸಿನ್ನ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಮಾರ್ಚ್ ವೇಳೆಗೆ ಫಲಿತಾಂಶಗಳು ಸಿದ್ಧವಾಗುವ ಸಾಧ್ಯತೆಯಿದೆ.
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಎರಡು-ಡೋಸ್ ಲಸಿಕೆಗಳಾಗಿದ್ದರೂ, ಅವು ವಿಭಿನ್ನ ರೀತಿಯದ್ದಾಗಿದೆ. ಒಂದೇ ಲಸಿಕೆಯನ್ನು ಎರಡು ಪ್ರಮಾಣದಲ್ಲಿ ಪಡೆಯಬೇಕಾಗುತ್ತದೆ.
ರೋಗ್ಯ ಇಲಾಖೆಯಲ್ಲಿ ನೋಂದಾಯಿಸಿರುವ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರ ಪಟ್ಟಿಯನ್ನು ಮಂಗಳವಾರ ರಾತ್ರಿ ಅಂತಿಮಗೊಳಿಸಲಾಗಿದ್ದು, ಲಸಿಕೆ ನೀಡಲು 235 ತಾಣಗಳನ್ನು ಸರ್ಕಾರ ಗುರುತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ, ಕೆಸಿ ಜನರಲ್ ಆಸ್ಪತ್ರೆ, ಸರ್ ಸಿ.ವಿ.ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್, ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್, ಮಲ್ಲಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಯಲಹಂಕದ ತಾಲ್ಲೂಕು ಆಸ್ಪತ್ರೆ, ಕೆ.ಆರ್ ಪುರಂ ತಾಲ್ಲೂಕು ಆಸ್ಪತ್ರೆ, ಅನೆಕಲ್ ತಾಲ್ಲೂಕು ಆಸ್ಪತ್ರೆ, ಮತ್ತು ಕಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವ್ಯಾಕ್ಸಿನೇಷನ್ ತಾಣಗಳಾಗಿ ಗುರುತಿಸಲಾಗಿದೆ.
"ನಾಲ್ಕು ತಿಂಗಳ ನಂತರ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲಾಗುವುದು, ಏಕೆಂದರೆ ಹೆಚ್ಚಿನ ಲಸಿಕೆಗಳನ್ನು ಆ ಹೊತ್ತಿಗೆ ರಾಜ್ಯಕ್ಕೆ ಆಗಮಿಸಿರುತ್ತವೆ. ಲಸಿಕೆಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಮತ್ತು ಸಾಗಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ದಕ್ಷತೆಯ ಬಗ್ಗೆ ಯಾವುದೇ ಸಂದೇಹಗಳಿಲ್ಲ. ಎಲ್ಲವನ್ನೂ ನಿಯಮಗಳ ಪ್ರಕಾರ ನಡೆಸಲಾಗುತ್ತಿದೆ. ಲಸಿಕೆಗಳನ್ನು ನೀಡಲು ಎರಡು ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ”ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.