ಚಿಕ್ಕಬಳ್ಳಾಪುರ: ದೃಷ್ಟಿಮಾಂದ್ಯ ಮಗು ಇದ್ದರೇನು, ಸತ್ತರೇನು ಎಂದು ಅಣ್ಣನ ಮಗಳನ್ನೇ ಕೊಂದ!
ತನ್ನನ್ನು ಪ್ರೀತಿಯಿಂದ ತಬ್ಬಿಕೊಳ್ಳಲು ಬಂದ ಸಹೋದರನ ಐದು ವರ್ಷದ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
Published: 13th January 2021 04:39 PM | Last Updated: 13th January 2021 04:45 PM | A+A A-

ಚಾರ್ವಿತಾ-ಶಂಕರ್
ಬೆಂಗಳೂರು: ತನ್ನನ್ನು ಪ್ರೀತಿಯಿಂದ ತಬ್ಬಿಕೊಳ್ಳಲು ಬಂದ ಸಹೋದರನ ಐದು ವರ್ಷದ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಅಂಗರೇಖನಹಳ್ಳಿಯ ಚಾರ್ವಿತಾ (5) ಕೊಲೆಯಾದ ಮಗು. ಕೃತ್ಯವೆಸಗಿದ ಚಿಕ್ಕಪ್ಪ ಶಂಕರ್(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹೂವಿನ ವ್ಯಾಪಾರಿಯಾಗಿದ್ದ ಶಂಕರ್ ನ ಅಣ್ಣನ ಮಗಳು ಚಾರ್ವಿತಾ ಹುಟ್ಟಿದಾಗಿನಿಂದ ದೃಷ್ಟಿ ದೋಷದಿಂದ ಬಳಲುತ್ತಿದ್ದಳು. ಬಾಲಕಿಯನ್ನು ಶಂಕರ್ ಕೆಟ್ಟ ಶಕುನವೆಂದು ಭಾವಿಸಿದ್ದ. ಇದೇ ವಿಚಾರವನ್ನು ಪ್ರತಿ ಬಾರಿಯೂ ಮನೆಯಲ್ಲಿ ಹೇಳುತ್ತಿದ್ದ ಎಂದು ತಿಳಿದುಬಂದಿದೆ.