ಯಲಚೇನಹಳ್ಳಿ- ಸಿಲ್ಕ್ ಇನ್ಸ್ ಟಿಟ್ಯೂಟ್ ವಿಸ್ತರಿತ ನಮ್ಮ ಮೆಟ್ರೊ ಮಾರ್ಗ ನಾಳೆ ಸಂಕ್ರಾಂತಿಗೆ ಲೋಕಾರ್ಪಣೆ
ಕೆಲ ದಿನಗಳ ಹಿಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಸೇವೆ ಆರಂಭಿಸಿ ಕೇಂದ್ರ ಸರ್ಕಾರ ಜನತೆಗೆ ಸಹಾಯ ಮಾಡಿತ್ತು. ಕಡಿಮೆ ದರದಲ್ಲಿ, ಸುಲಭವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವುದು ಸಾಕಾರವಾಗಿದೆ.
Published: 13th January 2021 10:59 AM | Last Updated: 13th January 2021 12:57 PM | A+A A-

ನಮ್ಮ ಮೆಟ್ರೊ
ಬೆಂಗಳೂರು: ಕೆಲ ದಿನಗಳ ಹಿಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಸೇವೆ ಆರಂಭಿಸಿ ಕೇಂದ್ರ ಸರ್ಕಾರ ಜನತೆಗೆ ಸಹಾಯ ಮಾಡಿತ್ತು. ಕಡಿಮೆ ದರದಲ್ಲಿ, ಸುಲಭವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವುದು ಸಾಕಾರವಾಗಿದೆ.
ಇದೀಗ ನಗರದ ಸಂಚಾರಿಗಳಿಗೆ ಮತ್ತೊಂದು ಅಂತಹದ್ದೇ ರೀತಿಯ ಸೇವೆ ನೀಡುತ್ತಿರುವ ಸರ್ಕಾರದಿಂದ ಯೆಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ ಟಿಟ್ಯೂಟ್ ಗೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರಕ್ಕೆ ನಾಳೆ ಸಂಕ್ರಾಂತಿ ದಿನ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. 6.29 ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಸಂಚಾರ ಮಾರ್ಗ ಇದಾಗಿದ್ದು, ಕೊಣನಕುಂಟೆ ಕ್ರಾಸ್, ದೊಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ಸೇರಿ ಒಟ್ಟು 5 ಎಲಿವೇಟೆಡ್ ಮೆಟ್ರೋ ನಿಲ್ದಾಣ ಹೊಂದಿದೆ. ಜನವರಿ 15ರಿಂದ ರೈಲು ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ.
After the successful launch of the train service to the Airport, here is one more step towards easing commute in Bengaluru. Namma Metro's 6 km Yelachenahalli to Silk Institute stretch of the Green Line will be flagged off on January 14. #BengaluruMission2022@cpronammametro pic.twitter.com/187jY5m2DT
— B.S. Yediyurappa (@BSYBJP) January 13, 2021