ಕೋವಿಡ್ ಲಸಿಕೆ: ಸರ್ಕಾರದ ಮಾಹಿತಿ ನಿರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳು
ಜ.16ರಿಂದ ದೇಶವ್ಯಾಪಿ ಕೊರೋನಾ ಲಸಿಕೆ ವಿತರಣೆ ಆರಂಭವಾಗುತ್ತಿದ್ದು, ಈ ನಡುವಲ್ಲೇ ಲಸಿಕೆ ವಿತರಣೆ ಕುರಿತು ಸರ್ಕಾರದ ಆದೇಶ ಹಾಗೂ ಸೂಚನೆಗಳಿಗಾಗಿ ರಾಜ್ಯದ ಖಾಸಗಿ ಆಸ್ಪತ್ರೆಗಳು ಕಾದು ಕುಳಿತಿವೆ.
Published: 13th January 2021 10:31 AM | Last Updated: 13th January 2021 12:55 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಜ.16ರಿಂದ ದೇಶವ್ಯಾಪಿ ಕೊರೋನಾ ಲಸಿಕೆ ವಿತರಣೆ ಆರಂಭವಾಗುತ್ತಿದ್ದು, ಈ ನಡುವಲ್ಲೇ ಲಸಿಕೆ ವಿತರಣೆ ಕುರಿತು ಸರ್ಕಾರದ ಆದೇಶ ಹಾಗೂ ಸೂಚನೆಗಳಿಗಾಗಿ ರಾಜ್ಯದ ಖಾಸಗಿ ಆಸ್ಪತ್ರೆಗಳು ಕಾದು ಕುಳಿತಿವೆ.
ಲಸಿಕೆ ವಿತರಣೆಗೆ ಈಗಾಗಲೇ ಖಾಸಗಿ ಆಸ್ಪತ್ರೆಗಳು ಸಕಲ ಸಿದ್ಧತೆಗಳನ್ನು ನಡೆಸಿದ್ದು, ಸಿಬ್ಬಂದಿಗಳಿಗೂ ತರಬೇತಿಗಳನ್ನು ನೀಡಿದೆ.
ಈ ಕುರಿತು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದ (ಫನಾ) ಅಧ್ಯಕ್ಷ ಹೆಚ್.ಎಂ.ಡಾ.ಪ್ರಸನ್ನ ಅವರು ಮಾತನಾಡಿ, 100 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡುವ ಕೇಂದ್ರಗಳಾಗಲಿವೆ. ಆದರೆ ಮೊದಲ ಹಂತದಲ್ಲಿ ಲಸಿಕೆಗಳನ್ನು ತಮ್ಮ ತಮ್ಮ ಸಿಬ್ಬಂದಿಗಳಿಗೆ ನೀಡಲಿದೆ ಎಂದು ಹೇಳಿದ್ದಾರೆ.
ಹೆಸರುಗಳನ್ನು ದಾಖಲು ಮಾಡಿರುವ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆಗಳನ್ನು ನೀಡಲಾಗುತ್ತದೆ. ಸರ್ಕಾರ ಆದೇಶದಂತೆ ಉಳಿದ ಆರೋಗ್ಯ ಕಾರ್ಯಕರ್ತರಿಗೂ ಲಸಿಕೆಗಳನ್ನು ನೀಡಲಾಗುತ್ತದೆ. ನಂತರ ಮುಂದಿನ ಹಂತದಲ್ಲಿ ವೃದ್ಧರು ಹಾಗೂ ಇತರರಿಗೆ ಲಸಿಕೆಗಳನ್ನು ನೀಡಲಾಗುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲೂ ಈಗಾಗಲೇ ಲಸಿಕೆ ಸಂಗ್ರಹಣೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆ ಸಿಬ್ಬಂದಿಗಳಿಗೂ ರಾಜ್ಯ ಸರ್ಕಾರದಿಂದ ತರಬೇತಿ ನೀಡಲಾಗಿದೆ. ಪ್ರತಿ ಖಾಸಗಿ ಆಸ್ಪತ್ರೆಯಿಂದ ಇಬ್ಬರು ಅಥವಾ ಮೂರು ಆರೋಗ್ಯ ಕಾರ್ಯಕರ್ತರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಇತರೆ ಸಿಬ್ಬಂದಿಗೆ ತರಬೇತಿ ನೀಡುತ್ತಾರೆ.
ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯಲ್ಲಿ 750 ಫಲಾನುಭವಿಗಳು ಲಸಿಕೆ ಪಡೆಯಲು ತಮ್ಮ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಈಗಾಗಲೇ ಮೂರು ಕೊಠಡಿಗಳನ್ನು ಸ್ಥಾಪಿಸಿದೆ.
ಲಸಿಕೆ ನೀಡುವ ಸಂದರ್ಭದಲ್ಲಿ ಸ್ಥಳದಲ್ಲಿ ಬಿಬಿಎಂಪಿಯ ಮೇಲ್ವಿಚಾರಕರು, ಮೂರು ಡೇಟಾ ಎಂಟ್ರಿ ಆಪರೇಟರ್ಗಳು ಮತ್ತು ಇಬ್ಬರು ಸೆಕ್ಯುರಿಟಿ ಗಾರ್ಡ್ಗಳನ್ನು ಇರಲಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಯಾವಾಗ ಲಸಿಕೆ ಸಿಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ನಾವು ಸಿದ್ಧರಿದ್ದೇವೆಂದಿದ್ದಾರೆ.
ನಮ್ಮ ಎಂಟು ವ್ಯಾಕ್ಸಿನೇಟರ್ಗಳಿಗೆ ತರಬೇತಿ ನೀಡಲಾಗಿದೆ. ಲಸಿಕೆ ದಿನಾಂಕದಂದು ಆರೋಗ್ಯ ಕಾರ್ಯಕರ್ತರು ತಮ್ಮ ಫೋನ್ಗಳಲ್ಲಿ ಸಂದೇಶವನ್ನು ಪಡೆಯುತ್ತಾರೆ ಎಂದು ಬಿಬಿಎಂಪಿ ನಮಗೆ ಮಾಹಿತಿ ನೀಡಿದೆ.
ಲಸಿಕೆ ಪಡೆಯುವ ದಿನ ಆರೋಗ್ಯ ಕಾರ್ಯಕರ್ತರು ಸಂಪರ್ಕಕ್ಕೆ ಸಿಗಲಿಲ್ಲ ಎಂಬುದೇ ಆದರೆ, ಮರುದಿನ ಲಸಿಕೆಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ ಎಂದು ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ರಣವೀರ್ ಸಿಂಗ್ ಸಲೂಜಾ ಹೇಳಿದ್ದಾರೆ.