ಶೃಂಗೇರಿ: ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲು
ಹೊಸದಾಗಿ ಜಾರಿಗೆ ಬಂದ ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ -2020 ಅಡಿಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಮೊದಲ ಬಾರಿಗೆ ಪ್ರಕರಣವೊಂದನ್ನು ಚಿಕ್ಕಮಗಳೂರಿನ ಶೃಂಗೇರಿ್ ಪೋಲೀಸರು ದಾಖಲಿಸಿದ್ದಾರೆ. ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಶಾನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ವಿರುದ್ಧ ಶೃಂಗೇರಿ ಪೊಲೀಸರು ಪ್ರಕರಣ
Published: 13th January 2021 11:19 PM | Last Updated: 13th January 2021 11:19 PM | A+A A-

ಶೃಂಗೇರಿ ಪೋಲೀಸ್ ಠಾಣೆ
ಶೃಂಗೇರಿ: ಹೊಸದಾಗಿ ಜಾರಿಗೆ ಬಂದ ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ -2020 ಅಡಿಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಮೊದಲ ಬಾರಿಗೆ ಪ್ರಕರಣವೊಂದನ್ನು ಚಿಕ್ಕಮಗಳೂರಿನ ಶೃಂಗೇರಿ್ ಪೋಲೀಸರು ದಾಖಲಿಸಿದ್ದಾರೆ. ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಶಾನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ವಿರುದ್ಧ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದನಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಶಾನ್ ಕೆಲವು ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದಾನೆ. ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜನವರಿ 8 ರಂದು ವರದಿಯಾದ ಘಟನೆಗೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಿಸಲಾಗಿದೆ. ಬೆಳಿಗ್ಗೆ 4 ಗಂಟೆಗೆ ಚೆಕ್ ಪೋಸ್ಟ್ ಸಮೀಪ ದನಗಳ ಸಾಗಿಸುವ ವಾಹನವು ಹಾದುಹೋಗಿರುವುದರ ಬಗೆಗೆ ಕೇಳಲಾಗಿ ಕಾನ್ಸ್ಟೆಬಲ್ ಇಲ್ಲ ಎಂದು ಹೇಳಿದಾಗ, ಐವರು ಅಪರಿಚಿತರು ಯು-ಟರ್ನ್ ತೆಗೆದುಕೊಂಡು ಶೃಂಗೇರಿಯ ಕಡೆಗೆ ಹೋದರು. ಮುಂಜಾನೆ 4.15 ರ ಸುಮಾರಿಗೆ ಕಾನ್ಸ್ಟೆಬಲ್ ಚೆಕ್ ಪೋಸ್ಟ್ ಬಳಿ ಗದ್ದಲವನ್ನು ಕೇಳಿಸಿಕೊಂಡು ಇನ್ನೊಬ್ಬ ಗೃಹರಕ್ಷಕ ಸಿಬ್ಬಂದಿಯೊಂದಿಗೆ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಜಖಂ ಆಗಿದ್ದಸರಕುಗಳ ವಾಹಕವನ್ನು ಅವರು ಗಮನಿಸಿದ್ದಾರೆ.
ಸುಮಾರು 15 ರಿಂದ 20 ದನಗಳನ್ನು ಲೋಡ್ ಮಾಡಲಾಗಿದ್ದ ಹಾಗೂ ಆ ಜಾಗದಲ್ಲಿರಕ್ತದ ಕಲೆಗಳನ್ನೂ ಅವನು ಗಮನಿಸುತ್ತಾರೆ. ಆದರೆ, ನಾಲ್ಕರಿಂದ ಐದು ಸ್ಥಳೀಯ ನಿವಾಸಿಗಳನ್ನು ಹೊರತುಪಡಿಸಿ ಯಾರೂ ವಾಹನದ ಅಕ್ಕಪಕ್ಕದಲ್ಲಿರಲಿಲ್ಲ.ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ದನಗಳನ್ನು ಕಸಾಯಿಖಾನೆಗೆ ಸಾಗಿಸಿದ ಆರೋಪದ ಮೇಲೆ ಕಾನ್ಸ್ಟೆಬಲ್ ವಾಹನದ ಚಾಲಕ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಚಾಲಕ ಶಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆ ನಂತರ ಕೈಮನೆ ಸಮೀಪ ಇದೇ ರೀತಿಯ ಘಟನೆ ವರದಿಯಾಗಿದೆ. ಕಾನ್ಸ್ಟೆಬಲ್ ಕುಮಾರ್ ಹೆಚ್ ಜನವರಿ 8 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕರ್ತವ್ಯದಿಂದ ಹಿಂದಿರುಗುತ್ತಿದ್ದಾಗ, ಸರಕು ಸಾಗಣೆ ಮಾಡುವವರು ರಸ್ತೆ ಮಧ್ಯೆ ತೊಂದರೆಗೊಳಗಾದ ರೀತಿಯಲ್ಲಿ ನಿಂತಿರುವುದನ್ನು ಕಂಡಿದ್ದಾರೆ. ಆತನನ್ನು ಸಮೀಪಿಸಿದಾಗ ವಾಹನದ ಚಾಲಕ ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿದೆ. . ಚಾಲಕನನ್ನು ಅಬಿದ್ ಅಲಿ ಎಂದು ಗುರುತಿಸಲಾಗಿದೆ. ಅವನಿಗೆ ನೀರು ಕೊಟ್ಟ ನಂತರ, ಕಾನ್ಸ್ಟೆಬಲ್ ಆತನಿಗೆ ನಾಲ್ಕು ಮಂದಿ ವಾಹನವನ್ನು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಯಿತು.ರ, ಅಲಿಯನ್ನು ಆಂಬ್ಯುಲೆನ್ಸ್ನಲ್ಲಿ ಶೃಂಗೇರಿ ಆಸ್ಪತ್ರೆಗೆ ಸಾಗಿಸಿದ್ದು ಇಲ್ಲಿ ಕೂಡ ಯಾವುದೇ ಸುರಕ್ಷತಾ ಕ್ರಮವಿಲ್ಲದೆ ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸಿದ್ದಕ್ಕಾಗಿ ಅಲಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಚಾಲಕರು ದಾವಣಗೆರೆ ಸಮೀಪ ರಾಣೆಬೆನ್ನೂರಿನಿಂದ ಮಂಗಳೂರಿಗೆ ಎರಡು ವಾಹನಗಳಲ್ಲಿ ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ -2020 ರ ಸೆಕ್ಷನ್ 5 (ದನಗಳ ಸಾಗಣೆಗೆ ನಿರ್ಬಂಧಗಳು) ಮತ್ತು 7 (ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವುದು ಖರೀದಿಸುವುದು ಅಥವಾ ವಿಲೇವಾರಿ ಮಾಡುವುದರ ನಿಷೇಧ) ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಹಲ್ಲೆಕೋರರ ಪತ್ತೆಯಾಗಿಲ್ಲ. ದನಗಳು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಎಂ.ಎಚ್. ಅಕ್ಷಯ್ ಈ ಬಗ್ಗೆ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಆದರೆ ಎಎಸ್ಪಿ ಶ್ರುತಿ ಈ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಪತ್ರಿಕೆಗೆ ತಿಳಿಸಿದ್ದಾರೆ.