ಕೋವಿಡ್: ರಾಜ್ಯದಲ್ಲಿಂದು 408 ಪಾಸಿಟಿವ್, 3 ಸಾವು, 564 ಮಂದಿ ಗುಣಮುಖ

ಕೊರೋನಾ ಸೋಂಕು ರಾಜ್ಯದಲ್ಲಿ ಇಳಿಮುಖವಾಗುತ್ತಿದ್ದು ಇಂದು ಹೊಸದಾಗಿ 408 ಪ್ರಕರಣ ವರದಿಯಾಗಿದೆ. ಇಂದೇ ಮೂವರು ಸಾವನ್ನಪ್ಪಿದ್ದರೆ 564 ಮಂದಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ.

Published: 14th January 2021 10:32 PM  |   Last Updated: 15th January 2021 01:18 PM   |  A+A-


Posted By : Raghavendra Adiga
Source : Online Desk

ಬೆಂಗಳೂರು: ಕೊರೋನಾ ಸೋಂಕು ರಾಜ್ಯದಲ್ಲಿ ಇಳಿಮುಖವಾಗುತ್ತಿದ್ದು ಇಂದು ಹೊಸದಾಗಿ 408 ಪ್ರಕರಣ ವರದಿಯಾಗಿದೆ. ಇಂದೇ ಮೂವರು ಸಾವನ್ನಪ್ಪಿದ್ದರೆ 564 ಮಂದಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ.

ಇಂದು ರಾಜ್ಯದಲ್ಲಿ  1,623 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,04,632 ಆರ್​ಟಿಪಿಸಿಆರ್ ಟೆಸ್ಟ್​ಗಳನ್ನು ನಡೆಸಲಾಗಿತ್ತು. 

ರಾಜ್ಯದಲ್ಲಿ ಒಟ್ಟೂ 9,29,960 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು 9,09,058 ಜನರು ಗುಣ ಹೊಂದಿದ್ದಾರೆ. ಇಂದಿನವರೆಗೆ ಕರ್ನಾಟಕದಲ್ಲಿ 12,155 ಮಂದಿ ಮಹಾಮಾರಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.

ಇಂದಿನ 14/01/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ https://t.co/Aw2ownkJH1 pic.twitter.com/TsQwxmUSNn

ಸದ್ಯ  8,728 ಸಕ್ರಿಯ ಕೊರೋನಾ ಪ್ರಕರಣಗಳಿದ್ದು ಈ ಪೈಕಿ 187 ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp