ಮನೆ, ಸೈಟ್ ಹೊಂದಿರುವ ನಗರವಾಸಿಗಳೇ ಅಧಿಕ ಆಸ್ತಿ ತೆರಿಗೆ ಕಟ್ಟಲು ಸಜ್ಜಾಗಿ: ಕೆಎಂಸಿ ಕಾಯ್ದೆಗೆ ಸರ್ಕಾರ ತಿದ್ದುಪಡಿ
ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇತರ ನಗರ ಪಾಲಿಕೆ ಮತ್ತು ಪುರಸಭೆ ವ್ಯಾಪ್ತಿಗಳಲ್ಲಿ ಆಸ್ತಿ ತೆರಿಗೆ ದರ ಹೆಚ್ಚಾಗಲಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ)ಕಾಯ್ದೆಯಡಿ ಆಸ್ತಿ ತೆರಿಗೆ ಹೆಚ್ಚಿಸಿ ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
Published: 14th January 2021 10:35 AM | Last Updated: 14th January 2021 11:29 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇತರ ನಗರ ಪಾಲಿಕೆ ಮತ್ತು ಪುರಸಭೆ ವ್ಯಾಪ್ತಿಗಳಲ್ಲಿ ಆಸ್ತಿ ತೆರಿಗೆ ದರ ಹೆಚ್ಚಾಗಲಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ)ಕಾಯ್ದೆಯಡಿ ಆಸ್ತಿ ತೆರಿಗೆ ಹೆಚ್ಚಿಸಿ ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ನಗರಪಾಲಿಕೆ, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಗಳಲ್ಲಿರುವ ಮನೆಗಳು ಮತ್ತು ಖಾಲಿ ಸೈಟ್ ಗಳ ಮೇಲಿನ ತೆರಿಗೆಯನ್ನು ಕೆಎಂಸಿ ಕಾಯ್ದೆಯ ಸೆಕ್ಷನ್ 109 ಮತ್ತು 109ಎಯಡಿ ಹೆಚ್ಚಿಸಲಾಗಿದೆ. ಬಳಕೆದಾರರ ಶುಲ್ಕವನ್ನು ಕಾಯ್ದಿರಿಸಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುವುದು, ಇದರಿಂದ ಕೊಳ್ಳುವವರು ಮತ್ತು ಜಿಎಸ್ ಡಿಪಿ ಹೆಚ್ಚಾಗಲಿದೆ ಎಂದು ಅವರು ಹೇಳಿದರು. ಆಸ್ತಿ ತೆರಿಗೆ ಮೌಲ್ಯ ಹೀಗಾಗಿ ಶೇಕಡ ೦.೨ರಿಂದ ಶೇಕಡ ೧೫ಕ್ಕೆ ಹೆಚ್ಚಳವಾಗಲಿದೆ.
1000 ಚದರಡಿ ವಿಸ್ತೀರ್ಣಕ್ಕಿಂತ ಕಡಿಮೆ ಅಳತೆ ಹೊಂದಿರುವ ಖಾಲಿ ಸೈಟ್ ಗಳು ಆಸ್ತಿ ತೆರಿಗೆಯಿಂದ ವಿನಾಯ್ತಿ ಪಡೆಯುತ್ತವೆ. ಮಾರ್ಗಸೂಚಿ ಬೆಲೆ ತೆರಿಗೆ ಲೆಕ್ಕಾಚಾರ ಅಳತೆ ಮಾಡಲು ಪರಿಗಣಿಸುವುದರಿಂದ ಆಸ್ತಿ ತೆರಿಗೆ ಕಟ್ಟುವ ಮಾಲೀಕರಿಗೆ ಈ ವರ್ಷ ಪ್ರಯೋಜನವಾಗಲಿದೆ. ಅದನ್ನು ಶೇಕಡಾ 50ರಿಂದ ಶೇಕಡಾ 25ಕ್ಕೆ ಇಳಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಕೆಎಂಸಿ ಕಾಯ್ದೆಯನ್ನು ಜನವರಿ 25ರೊಳಗೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಆದೇಶ ನೀಡಿದೆ.