ಮಂಗಳೂರು-ಮಂತ್ರಾಲಯ ನಡುವೆ ನೂತನ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಪ್ರಾರಂಭ
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನವರಿ 14 ರ ಗುರುವಾರ ಮಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ ಕೆಎಸ್ಆರ್ಟಿಸಿ (ನಾನ್ ಎಸಿ ಸ್ಲೀಪರ್) ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.
Published: 14th January 2021 09:34 PM | Last Updated: 18th January 2021 01:48 PM | A+A A-

ಶಾಸಕ ವೇದವ್ಯಾಸ ಕಾಮತ್ ನವರಿ 14 ರ ಗುರುವಾರ ಮಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ ಕೆಎಸ್ಆರ್ಟಿಸಿ (ನಾನ್ ಎಸಿ ಸ್ಲೀಪರ್) ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನವರಿ 14 ರ ಗುರುವಾರ ಮಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ ಕೆಎಸ್ಆರ್ಟಿಸಿ (ನಾನ್ ಎಸಿ ಸ್ಲೀಪರ್) ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾದ್ಯಮಗಳೊಡನೆ ಮಾತನಾಡಿದ ಶಾಸಕ "ಬಸ್ ಮಂಗಳೂರಿನಿಂದ ಉಡುಪಿ, ಕುಂದಾಪುರ, ಹಲಾಡಿ, ಸಿದ್ದಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ, ಚೆನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಅಧೋನಿ ಮಾರ್ಗದಲ್ಲಿ ಮಂತ್ರಾಲಯಕ್ಕೆ ತೆರಳಲಿದೆ. ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 3.30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಮಂತ್ರಾಲಯಕ್ಕೆ ತಲುಪಲಿದೆ: ಎಂದರು.
ಮಂತ್ರಾಲಯದಿಂದ ಬಸ್ ಸಂಜೆ 5.30 ಕ್ಕೆ ಹೊರಟರೆ ಮರುದಿನ ಬೆಳಿಗ್ಗೆ 8.30 ಕ್ಕೆ ಮಂಗಳೂರು ತಲುಪಲಿದೆ.
ಈ ಬಸ್ ಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಇದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ - ಮಂಗಳೂರು ಬಸ್ ನಿಲ್ದಾಣ: 7760990720, ಮಂಗಳೂರು ಅಡ್ವಾನ್ಸ್ ಬುಕಿಂಗ್ ಕೇಂದ್ರ: 9663211553, ಉಡುಪಿ ಬಸ್ ನಿಲ್ದಾಣ: 9663266400, ಕುಂದಾಪುರ ಬಸ್ ನಿಲ್ದಾಣ: 9663266009, ಮಂತ್ರಾಲಯ ಬಸ್ ನಿಲ್ದಾಣ: 08512279444.