ಒಂಟೆಗೆ ಡಿಕ್ಕಿ ಹೊಡೆದು ಬೆಂಗಳೂರಿನ ಖ್ಯಾತ ಬೈಕರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ದುರ್ಮರಣ!
ಇವರು ಬೆಂಗಳೂರಿನ ಖ್ಯಾತ ಬೈಕರ್. ಭಾರತದ ಪ್ರಮುಖ ಸೆಲೆಬ್ರಿಟಿ ಬೈಕರ್ಗಳಲ್ಲಿ ಒಬ್ಬರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನೂರು ಕಿಲೋಮೀಟರ್ ಸ್ಪೀಡ್ ನಲ್ಲಿ ಬೈಕ್ ಓಡಿಸಬಲ್ಲ ನಿಸ್ಸೀಮ ಕಿಂಗ್ ರಿಚರ್ಡ್ ಶ್ರೀನಿವಾಸನ್.
Published: 15th January 2021 07:42 PM | Last Updated: 15th January 2021 07:58 PM | A+A A-

ಶ್ರೀನಿವಾಸನ್
ಬೆಂಗಳೂರು: ಇವರು ಬೆಂಗಳೂರಿನ ಖ್ಯಾತ ಬೈಕರ್. ಭಾರತದ ಪ್ರಮುಖ ಸೆಲೆಬ್ರಿಟಿ ಬೈಕರ್ಗಳಲ್ಲಿ ಒಬ್ಬರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನೂರು ಕಿಲೋಮೀಟರ್ ಸ್ಪೀಡ್ ನಲ್ಲಿ ಬೈಕ್ ಓಡಿಸಬಲ್ಲ ನಿಸ್ಸೀಮ ಕಿಂಗ್ ರಿಚರ್ಡ್ ಶ್ರೀನಿವಾಸನ್.
5 ಖಂಡಗಳಲ್ಲಿ 37 ದೇಶಗಳಿಗೆ ಸೈಕ್ಲಿಂಗ್ ಮಾಡಿದ ಮಹಾನ್ ಬೈಕರ್. ಅಂತಹ ಒಬ್ಬ ಖ್ಯಾತ ಬೈಕರ್ ಒಂಟೆಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವುದು ದುರಂತ. ಭಾರತದ ಪ್ರಸಿದ್ಧ ಬೈಕ್ ಸವಾರರಲ್ಲಿ ಒಬ್ಬರಾದ ಕಿಂಗ್ ರಿಚರ್ಡ್ ಶ್ರೀನಿವಾಸನ್ ಬುಧವಾರ ರಾತ್ರಿ (ಜನವರಿ 13,2021) ಒಂಟೆಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೂಲದ ಶ್ರೀನಿವಾಸನ್ ಅವರು ತಮ್ಮ ಬೈಕ್ ನಲ್ಲಿ 65,000 ಕಿಲೋಮೀಟರ್ ಪ್ರಯಾಣಿಸಿ ವಿಶೇಷ ಮನ್ನಣೆ ಪಡೆದಿದ್ದರು. ಇತ್ತೀಚೆಗೆ, ಬೆಂಗಳೂರಿನಿಂದ 8,000 ಕಿ.ಮೀ ಪ್ರಯಾಣದ ಭಾಗವಾಗಿ ಅವರು ಮೂವರು ಸ್ನೇಹಿತರೊಂದಿಗೆ ಬಿಎಂಡಬ್ಲ್ಯು ಜಿಎಸ್ ಬೈಕ್ನಲ್ಲಿ ಜೈಸಲ್ಮೇರ್ಗೆ ತಲುಪಿದರು.
ಘಟನೆ ವೇಳೆ ಫತೇಘರ್ ಪ್ರದೇಶದಲ್ಲಿ ಒಂಟೆಯೊಂದು ಇದ್ದಕ್ಕಿದ್ದಂತೆ ರಸ್ತೆಗೆ ಬಂದಾಗ ಶ್ರೀನಿವಾಸನ್ ತನ್ನ ಬೈಕು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದ ಅವರು ಒಂಟೆಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ಶ್ರೀನಿವಾಸನ್ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ.
ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸಿದ್ದ ಶ್ರೀನಿವಾಸನ್ ಜನವರಿ 23ರಂದು ಬೆಂಗಳೂರಿಗೆ ಹಿಂದಿರುಗಬೇಕಿತ್ತು. ಆದರೆ.. ದುರದೃಷ್ಟವಶಾತ್ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಶ್ರೀನಿವಾಸ್ ಹೆಂಡತಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಶ್ರೀನಿವಾಸನ್ 2018ರಲ್ಲಿ ಬೆಂಗಳೂರಿನಿಂದ ಲಂಡನ್ಗೆ ಬೈಕ್ ಟ್ರಿಪ್ ಮಾಡಿದರು. ಮುಂದಿನ ವರ್ಷ ಅವರು ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾದಾದ್ಯಂತದ ಸಮುದ್ರಯಾನ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ತಮ್ಮ ನೆಚ್ಚಿನ ಬೈಕ್ ಟ್ರಿಪ್ನಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ.