ರಾಜನಾಥ್ ಸಿಂಗ್ ರಿಂದ ಭಾರತದ ಪ್ರಪ್ರಥಮ ದೇಶೀಯ ತಯಾರಿಕೆಯ ಚಾಲಕರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನಾವರಣ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ದೇಶದ ಪ್ರಪ್ರಥಮ ದೇಶೀಯ ವಿನ್ಯಾನ ಹಾಗೂ ಅಭಿವೃದ್ಧಿಪಡಿಸಿದ ವಾಲಕರಹಿತ  ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನಾವರಣಗೊಳಿಸಿದರು.

Published: 15th January 2021 07:58 PM  |   Last Updated: 15th January 2021 08:02 PM   |  A+A-


ಭಾರತದ ಪ್ರಪ್ರಥಮ ದೇಶೀಯ ವಿನ್ಯಾಸದ ಚಾಲಕರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್

Posted By : Raghavendra Adiga
Source : PTI

ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ದೇಶದ ಪ್ರಪ್ರಥಮ ದೇಶೀಯ ವಿನ್ಯಾನ ಹಾಗೂ ಅಭಿವೃದ್ಧಿಪಡಿಸಿದ ವಾಲಕರಹಿತ  ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನಾವರಣಗೊಳಿಸಿದರು.

ಬೆಂಗಳೂರಿನ ಬಿಇಎಂಎಲ್ ಉತ್ಪಾದನಾ ಕೇಂದ್ರದಲ್ಲಿ ಸಿಂಗ್ ಅವರು ಈ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನ್ನುಅನಾವರಣ ಮಾಡಿದ್ದಾರೆ.

ಬಿಇಎಂಎಲ್ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು , ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ  ಎಂಜಿನಿಯರ್‌ಗಳು ಮತ್ತು ತಂತ್ರಜ್ಞರ ತಂಡವು ಮಾಡುತ್ತಿರುವ ಉತ್ತಮ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ."ಅವರು ಆತ್ಮನಿರ್ಭಾರ ಭಾರತದ  ನಿಜವಾದ ಯೋಧರು, ಭಾರತವನ್ನು  ಮುಂದಕ್ಕೆ ಕರೆದೊಯ್ಯುವವರಿದ್ದಾರೆ." ಎಂದು ಅವರು ಹೇಳಿದರು.

ಬಿಇಎಂಎಲ್ ಹೇಳಿಕೆಯಂತೆ ಕಂಪನಿಯ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿ ತಯಾರಾಗುತ್ತಿರುವ ಅತ್ಯಾಧುನಿಕ ಚಾಲಕರಹಿತ ಮೆಟ್ರೋ  ರೈಲ್ವೆ ಇಂಜಿನ್ ಕೋಚ್ ಗಳು  ಸ್ಟೇನ್‌ಲೆಸ್-ಸ್ಟೀಲ್ ಹೊರಮೈನೊಂದಿಗೆ  ಮಾಡಲ್ಪಟ್ಟಿದ್ದು, ಆರು ಕೋಚ್ ಗಳ ಮೆಟ್ರೋ ರೈಲು-ಸೆಟ್ ನಲ್ಲಿ 2280 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (ಎಂಎಂಆರ್‌ಡಿಎ) ಯ ಎಂಆರ್‌ಎಸ್ 1 ಯೋಜನೆಗಾಗಿ ಬಿಇಎಂಎಲ್ ಒಟ್ಟು 576 ಕೋಚ್ ಗಳನ್ನು ತಯಾರಿಸಲಿದ್ದು  ಜನವರಿ 2024 ರವರೆಗೆ ಹಂತಹಂತವಾಗಿ ಇದನ್ನು ಸರಬರಾಜು ಮಾಡಲಾಗುತ್ತದೆ. ಡ್ರೈವರ್‌ಲೆಸ್ ಮೆಟ್ರೋ ಕೋಚ್ ಗಳ ಗಿ ಕಮಿಷನ್, ಟೆಸ್ಟಿಂಗ್ ಮತ್ತು ರೌಂಡ್-ದಿ-ಕ್ಲಾಕ್ ಸೇವೆಗಳನ್ನು ಪರಿಚಯಿಸಲು  ಮುಂಬೈನ ಎಂಎಂಆರ್‌ಡಿಎ, ಚಾರ್ಕೋಪ್ ಮೆಟ್ರೋ ಡಿಪೋದಲ್ಲಿ ಬಿಇಎಂಎಲ್ ಇತ್ತೀಚೆಗೆ ತನ್ನ ಡಿಪೋ ಕಚೇರಿಯನ್ನು ತೆರೆಯಿತು.

 

 

ಇಂದಿನ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ರಾಜ್ ಕುಮಾರ್ ಐಎಎಸ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಮತ್ತು ಬಿಇಎಂಎಲ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹೋತಾ ಉಪಸ್ಥಿತರಿದ್ದರು. 

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp