ಧಾರವಾಡ ಭೀಕರ ಅಪಘಾತ: ಮೃತಪಟ್ಟವರ ವಿವರ

ಇಂದು ನಸುಕಿನ ವೇಳೆ ಧಾರವಾಡಲ್ಲಿ ಸಂಭವಿಸಿದ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವಿನ ಅಪಘಾತದಲ್ಲಿ  11 ಮಂದಿ ಮೃತಪಟ್ಟಿದ್ದು ಇದೀಗ ಅವರ ವಿವರ ಬಹಿರಂಗವಾಗಿದೆ.

Published: 15th January 2021 11:42 PM  |   Last Updated: 15th January 2021 11:42 PM   |  A+A-


Posted By : Raghavendra Adiga
Source : Online Desk

ಧಾರವಾಡ: ಇಂದು ನಸುಕಿನ ವೇಳೆ ಧಾರವಾಡಲ್ಲಿ ಸಂಭವಿಸಿದ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವಿನ ಅಪಘಾತದಲ್ಲಿ  11 ಮಂದಿ ಮೃತಪಟ್ಟಿದ್ದು ಇದೀಗ ಅವರ ವಿವರ ಬಹಿರಂಗವಾಗಿದೆ.

ಅಪಘಾತದಲ್ಲಿ ಮೃತರಾದವರ ವಿವರ ಹೀಗಿದೆ- ವರ್ಷಿತಾ ವೀರೇಶ್ (46), ಮಂಜುಳಾ ನಟೇಶ್ (47), ರಾಜೇಶ್ವರಿ ಶಿವಕುಮಾರ್ (40), ವೀಣಾ ಪ್ರಕಾಶ್ (47), ಮಲ್ಲಿಕಾರ್ಜುನ ತಿಮ್ಮಪ್ಪ (27), ಹೇಮಲತಾ (40), ಪರಂಜ್ಯೋತಿ (47), ಯಶ್ಮಿಕಾ (20), ರಾಜು ಸೋಮಪ್ಪ (38), ಕ್ಷೀರಾ ಸುರೇಶ್ (47), ಪ್ರೀತಿ ರಾಜ್ ಕುಮಾರ್ (46)

ಅಪಘಾತದಲ್ಲಿ ಗಾಯಗೊಂಡವರೆಂದರೆ- ಆಶಾ ಬೇತೂರ್ (47), ವೇದಾ (46), ಉಷಾರಾಣಿ(46), ಪೂರ್ಣಿಮಾ ಸುರೇಶ್ ಬಾಬು (46), ಪ್ರವೀಣಾ ಪ್ರಕಾಶ್ (46) ಮತ್ತು ಪ್ರಕರಣದ ಪ್ರಮುಖ ಆರೋಪಿಯಾದ ಟಿಪ್ಪರ್ ಚಾಲಕ ಬಸವರಾಜ್ ಖಾರದೊಳ್ಳಿ (25)

ಟಿಟಿಯಲ್ಲಿದ್ದವರು ಶಾಲಾದಿನಗಳಿಂದಲೂ ಪರಸ್ಪರ  ಪರಿಚಯದವರಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಸಂಪರ್ಕದಲ್ಲಿದ್ದರು. ದಾವಣಗೆರೆಯಲ್ಲಿ ಊಟಕ್ಕಾಗಿ ಸೇರುತ್ತಿದ್ದ ಇವರು ಈ ಬಾರಿ ಗೋವಾದಲ್ಲಿ ರೆಸಾರ್ಟ್ ಬುಕ್ ಮಾಡಿದ್ದರು. ಧಾರವಾಡದಲ್ಲಿ ಉಪಹಾರಕ್ಕಾಗಿ ವಾಹನ ನಿಲ್ಲಿಸಬೇಕಿತ್ತು, ಅಷ್ಟರಲ್ಲಿ ವಾಹನ ಅಪಘಾತಕ್ಕೀಡಾಗಿ ದುರಂತ ನಡೆದು ಹೋಗಿತ್ತು.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp