ಪ್ರಜ್ಞೆ ಬಂದಾಗ ಮೃತದೇಹಗಳು, ಛಿದ್ರಗೊಂಡ ಅವಶೇಷಗಳ ನಡುವೆ ಇದ್ದೆ: ಧಾರವಾಡ ಅಪಘಾತದಲ್ಲಿ ಬದುಕುಳಿದ ಮಹಿಳೆ!
ಧಾರವಾಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಬದುಕಿ ಉಳಿದ ವ್ಯಕ್ತಿಯೋರ್ವರು ಈ ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ.
Published: 15th January 2021 06:38 PM | Last Updated: 15th January 2021 07:26 PM | A+A A-

ಧಾರವಾಡ ಅಪಘಾತ
ಹುಬ್ಬಳ್ಳಿ: ಧಾರವಾಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಬದುಕಿ ಉಳಿದ ವ್ಯಕ್ತಿಯೋರ್ವರು ಈ ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ.
ಅಪಘಾತಕ್ಕೀಡಾದ ವಾಹನದಲ್ಲಿದ್ದ ಆಶಾ ಜಗದೀಶ್ ಬೆಟೂರ್ (40) ಕೈ ಮುರಿದುಕೊಂಡು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. "ಪ್ರಜ್ಞೆ ಬಂದಾಗ ಮೃತದೇಹಗಳು, ಛಿದ್ರಗೊಂಡ ದೇಹಗಳ ನಡುವೆ ಇದ್ದೆ, ಪೊಲೀಸರು ಹಾಗೂ ಹೆದ್ದಾರಿ ಗಸ್ತು ಪಡೆ ಸಹಾಯಕ್ಕೆ ಬರುವವರೆಗೂ ಸಹಾಯಕ್ಕೆ ಬರುವವರೆಗೂ ಯಾರೂ ಬರಲಿಲ್ಲ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟೆಂಪೋದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ನಡೆದಿದೆ.
ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ಬಹುತೇಕರು ವೈದ್ಯಕೀಯ ವೃತ್ತಿಯಲ್ಲಿದ್ದರು ಮತ್ತು ಇವರೆಲ್ಲರೂ ಶಾಲಾ ಸ್ನೇಹಿತರಾಗಿದ್ದು, ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟ್ಟಿದ್ದರು.
ಮೃತ 10 ಮಹಿಳೆಯರ ಪೈಕಿ ನಾಲ್ವರು ವೈದ್ಯರಾಗಿದ್ದರೆ, ಇತರರು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಶಾಲಾ ಸ್ನೇಹಿತರಾಗಿದ್ದು, ಗೋವಾಕ್ಕೆ ಒಂದು ದಿನದ ಟ್ರಿಪ್ ಹೊರಟ್ಟಿದ್ದರು.
ನಾನು ಎಚ್ಚರಗೊಂಡಾಗ, ಧಾರವಾಡದಲ್ಲಿ ನಮಗಾಗಿ ಕಾಯುತ್ತಿದ್ದ ಸಂಬಂಧಿಕರಿಗೆ ಮೊಬೈಲ್ ನಿಂದ ಕರೆ ಮಾಡಿದೆ. ಘಟನೆ ಬಗ್ಗೆ ತಿಳಿದು ಅವರ ಸ್ನೇಹಿತರು ಸಹಾಯಕ್ಕಾಗಿ ಧಾವಿಸಿದರು. ಬಳಿಕ ಬದುಕಿ ಉಳಿದವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಶಾ ವಿವರಿಸಿದ್ದಾರೆ.
ಟಿಟಿಯಲ್ಲಿದ್ದವರು ಶಾಲಾದಿನಗಳಿಂದಲೂ ಪರಸ್ಪರ ಪರಿಚಯವಿದ್ದೆವು, ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಸಂಪರ್ಕದಲ್ಲಿದ್ದೆವು. ಒಂದು ದಿನದ ಪ್ರವಾಸ, ದಾವಣಗೆರೆಯಲ್ಲಿ ಊಟಕ್ಕಾಗಿ ಸೇರುತ್ತಿದ್ದೆವು. ಈ ಬಾರಿ ಗೋವಾದಲ್ಲಿ ರೆಸಾರ್ಟ್ ಬುಕ್ ಮಾಡಿದ್ದೆವು, ಧಾರವಾಡದಲ್ಲಿ ಉಪಹಾರಕ್ಕಾಗಿ ವಾಹನ ನಿಲ್ಲಿಸಬೇಕಿತ್ತು, ಅಷ್ಟರಲ್ಲಿ ವಾಹನ ಅಪಘಾತಕ್ಕೀಡಾಯಿತು ಎಂದು ಅವರು ಹೇಳಿದ್ದಾರೆ. ಅಪಘಾತದಲ್ಲಿ ಬದುಕಿ ಉಳಿದ ಆಶಾ ಅಪಾಯದಿಂದ ಪಾರಾಗಿದ್ದಾರೆ.