ಗುಂಡ್ಲುಪೇಟೆ: ಕಾಡಾನೆಗಳ ದಾಳಿಗೆ ತೋಟದ ಮನೆ ಧ್ವಂಸ; ಆತಂಕದಲ್ಲಿ ರೈತರು

ತಾಲ್ಲೂಕಿನ ಬೇಗೂರು ಸಮೀಪ ಹೊಸಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಹೊಸಪುರ ಗ್ರಾಮದ ಹೊರವಲಯದ ಮಹದೇವಚಾರಿ ಎಂಬುವವರ ಮನೆಯ ಮೇಲ್ಚಾವಣಿ ಕಿತ್ತೆಸೆದು ಮನೆಯನ್ನು ಧ್ವಂಸ ಮಾಡಿ ಕೂಯ್ದು ಇಟ್ಟಿದ್ದ ರಾಗಿ ತೆನೆಗಳನ್ನು ತಿಂದುಹಾಕಿವೆ.

Published: 15th January 2021 03:19 PM  |   Last Updated: 15th January 2021 04:46 PM   |  A+A-


Elephant Attack Photo

ಆನೆ ದಾಳಿ ದೃಶ್ಯ

Posted By : Vishwanath S
Source : UNI

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪ ಹೊಸಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಹೊಸಪುರ ಗ್ರಾಮದ ಹೊರವಲಯದ ಮಹದೇವಚಾರಿ ಎಂಬುವವರ ಮನೆಯ ಮೇಲ್ಚಾವಣಿ ಕಿತ್ತೆಸೆದು ಮನೆಯನ್ನು ಧ್ವಂಸ ಮಾಡಿ ಕೂಯ್ದು ಇಟ್ಟಿದ್ದ ರಾಗಿ ತೆನೆಗಳನ್ನು ತಿಂದುಹಾಕಿವೆ.

ಓಂಕಾರ ಅರಣ್ಯ ವಲಯದಿಂದ ಆಹಾರ ಅರಸಿ ಬಂದ ಕಾಡಾನೆಗಳು ಮೂರ್ನಾಲ್ಕು ಎಕರೆಯಲ್ಲಿ ರಾಗಿ ಬೆಲೆ ಬೆಳೆದ ಬೆಳೆದು ಕಟಾವು ಮಾಡಿಟ್ಟಿದ್ದರು, ಮಳೆ ಇದ್ದ ಕಾರಣ ಜಮೀನಿನ ಮನೆಯಲ್ಲಿ ರಾಗಿ ತೆನೆ ಸಂಗ್ರಹಿಸಿಟ್ಟಿದ್ದರು ಏಕಾಏಕಿ ಕಾಡಾನೆಗಳ ಗುಂಪು ತೆನೆಯನ್ನು ತಿಂದು ಮನೆ ಧ್ವಂಸ ಮಾಡಿವೆ.

ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳತ್ತ ಕಾಡಾನೆಗಳು ಬಾರದ ರೀತಿಯಲ್ಲಿ ಆಳವಾದ ಟ್ರಂಚ್ ತೆಗೆದು ರೈಲ್ವೆ ಕಂಬಿಗಳನ್ನು ಜೋಡಿಸಬೇಕು ಟ್ರಂಚ್ ತೆಗೆದರೆ ಮಳೆಗಾಲದಲ್ಲಿ ಮುಚ್ಚಿಹೋಗುತ್ತದೆ ಅದ್ದರಿಂದ ರೈಲ್ವೆ ಕಂಬಿಗಳ ಅಳವಡಿಸಬೇಕು ಎಂದು ರೈತರು ಒತ್ತಾಯಿಸಿದರು.

ರಾಗಿ ಹುಲ್ಲಿನ ವಾಸನೆಗೆ ಬಂದು ಮನೆಯ ಶೀಟ್ ಎತ್ತಿವೆ ನಾವು ಸಿಬ್ಬಂದಿಗಳ ಸಮೇತ ತೆರಳಿ ಮಾಜರು ಮಾಡಿದ್ದೇವೆ, ಅನೆ ದಾಳಿಯಿಂದ ನಷ್ಟವಾದವರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ, ಹುರುಳಿ ಕೂಯ್ಲಿನ ಸಮಯದಲ್ಲಿ ನಾಲ್ಕೈದು ಆನೆಗಳ ಗುಂಪು ಬರುತ್ತವೆ, ಟ್ರಂಚ್ ತೋಡಿದ್ದರು ಕೆರೆ ಸಮೀಪ ಮರಳಿನ ಪ್ರಮಾಣ ಹೆಚ್ಚಾಗಿದ್ದು ದಾರಿ ಮಾಡಿಕೊಂಡು ಬರುತ್ತವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆನೆ ದಾಳಿಯಿಂದ ನಷ್ಟವಾಗಿರೋದು ಕಡಿಮೆ.

ವರದಿ: ಗುಳಿಪುರ ನಂದೀಶ. ಎಂ


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp