ಕೊಡಗು: ಕೆರೆಗೆ ಮಗುಚಿ ಬಿದ್ದ ಕಾರು: ತಾಯಿ, ಮಗಳು ಸಾವು

ನಿಯಂತ್ರಣ ತಪ್ಪಿದ ಕಾರೊಂದು ಮಗುಚಿ ಕೆರೆಗೆ ಬಿದ್ದ ಪರಿಣಾಮ ತಾಯಿ, ಮಗಳು ಕಾರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿಯಲ್ಲಿ ಸಂಭವಿಸಿದೆ.

Published: 15th January 2021 02:17 PM  |   Last Updated: 15th January 2021 02:17 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : UNI

ಕೊಡಗು: ನಿಯಂತ್ರಣ ತಪ್ಪಿದ ಕಾರೊಂದು ಮಗುಚಿ ಕೆರೆಗೆ ಬಿದ್ದ ಪರಿಣಾಮ ತಾಯಿ, ಮಗಳು ಕಾರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿಯಲ್ಲಿ ಸಂಭವಿಸಿದೆ.

ತಾಯಿ ಬಬಿತಾ, ಮಗಳು ಪಲ್ಲವಿ ಮೃತ ದುರ್ದೈವಿಗಳು‌. ಮಡಿಕೇರಿ ಅರಣ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್​, ಬಬಿತಾ ಮತ್ತು ಮಗಳು ಪಲ್ಲವಿ ಕಾರಿನಲ್ಲಿ ಸುಂಟಿಕೊಪ್ಪದಿಂದ ಮಡಿಕೇರಿಗೆ ಬರುವ ವೇಳೆ ಈ ಅವಗಢ ಸಂಭವಿಸಿದೆ. 

ಘಟನೆ ಬಳಿಕ ವೆಂಕಟೇಶ್​ ಈಜುತ್ತ ದಡ ಸೇರಿದ್ದಾರೆ. ಆದರೆ, ಪತ್ನಿ ಬಬಿತಾ ಮತ್ತು ಮಗಳು ಪಲ್ಲವಿ ಕಾರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.  ಕ್ರೇನ್ ಬಳಸಿ ಕೆರೆಯಿಂದ ಕಾರನ್ನು ಮೇಲೆತ್ತಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp