ತುರಹಳ್ಳಿ ಅರಣ್ಯವನ್ನು ಟ್ರೀ ಪಾರ್ಕ್ ಆಗಿ ಅಭಿವೃದ್ಧಿಪಡಿಸಲು ಯೋಜನೆ

ಬೆ೦ಗಳೂರು ಮಹಾನಗರದ ಅತ್ಯುತ್ತಮವಾದ ವಿಲಕ್ಷಣ ತಾಣಗಳ ಪೈಕಿ ಒ೦ದಾಗಿರುವ ತುರಹಳ್ಳಿ ಅರಣ್ಯ ಪ್ರದೇಶವನ್ನು ಟ್ರೀ ಪಾರ್ಕ್ ನ್ನಾಗಿ ಮಾಡುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. 

Published: 15th January 2021 01:24 PM  |   Last Updated: 15th January 2021 01:54 PM   |  A+A-


Image used for representational purpose only.

ಅರಣ್ಯ ಪ್ರದೇಶ ( ಸಾಂಕೇತಿಕ ಚಿತ್ರ)

Posted By : Srinivas Rao BV
Source : The New Indian Express

ಬೆ೦ಗಳೂರು: ಬೆ೦ಗಳೂರು ಮಹಾನಗರದ ಅತ್ಯುತ್ತಮವಾದ ವಿಲಕ್ಷಣ ತಾಣಗಳ ಪೈಕಿ ಒ೦ದಾಗಿರುವ ತುರಹಳ್ಳಿ ಅರಣ್ಯ ಪ್ರದೇಶವನ್ನು ಟ್ರೀ ಪಾರ್ಕ್ ನ್ನಾಗಿ ಮಾಡುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. 

ಸಿಎಂ ಯಡಿಯೂರಪ್ಪ ಅವರ ಬೆಂಗಳೂರು ಮಿಷನ್ 2022 ರ ಯೋಜನೆಯ ಭಾಗವಾಗಿ ನಿರ್ಮಾಣ ಮಾಡಲಾಗುತ್ತಿರುವ ಟ್ರೀ ಪಾರ್ಕ್ ಗಳ ಪೈಕಿ ತುರಹಳ್ಳಿ ಅರಣ್ಯ ಪ್ರದೇಶವನ್ನೂ ಟ್ರೀ ಪಾರ್ಕ್ ಮಾಡುವುದಕ್ಕೆ ಗುರುತಿಸಲಾಗಿದೆ. 

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಟ್ರೀ ಪಾರ್ಕ್ ಮಾಡಬಹುದಾಗಿರುವ ಪ್ರದೇಶವನ್ನು ಗುರುತಿಸುವುದಕ್ಕೆ ಸರ್ವೇ ಕೆಲಸವನ್ನೂ ಪ್ರಾರಂಭಿಸಿದ್ದಾರೆ. 

ತುರಹಳ್ಳಿ ಅರಣ್ಯದ ಭಾಗಶಃ ಪ್ರದೇಶವನ್ನು ಈಗಾಗಲೇ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಿದ್ದು ವಾಕಿಂಗ್ ಸ್ಪೇಸ್ ಹಾಗೂ ಕ್ಯಾನೊಪಿಯನ್ನು ಸೃಷ್ಟಿಸಲಾಗಿದೆ. ಆದರೆ ಅರಣ್ಯದ ಕೆಲವು ಭಾಗಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. 

ಈ ಬೆಳವಣಿಗೆಗಳಿಂದಾಗಿ ಹಲವು ಶಾಸಕರು ತಾವು ಪ್ರತಿನಿಧಿಸುತ್ತಿರುವ ಪ್ರದೇಶಗಳಲ್ಲಿರುವ ಅರಣ್ಯಗಳ ಭಾಗಗಳಲ್ಲಿ ಲಂಗ್ ಸ್ಪೇಸ್ ಗಳನ್ನು ಸೃಷ್ಟಿ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ. 

ಅರಣ್ಯದ ಒಂದು ಭಾಗವನ್ನು ಟ್ರೀ ಪಾರ್ಕ್ ಮಾಡುವುದರಿಂದ ಈಗಾಗಲೇ ಇರುವ ಸ್ವಾಭಾವಿಕ ಲಂಗ್ ಸ್ಪೇಸ್ (lung space) ಕಡಿಮೆಯಾಗುತ್ತದೆ. ಆದರೆ ಜನರ ಉಪಸ್ಥಿತಿ ಇದ್ದಲ್ಲಿ, ಉತ್ತಮ ನಿಗಾ ವಹಿಸಬಹುದು ಹಾಗೂ ಅಕ್ರಮ ಚಟುವಟಿಕೆಗಳು ಒತ್ತುವರಿಗಳನ್ನು ತಡೆಗಟ್ಟಬಹುದೆಂಬ ಅಭಿಪ್ರಾಯ ಸ್ಪಷ್ಟವಾಗಿದೆ ಎನ್ನುತ್ತಾರೆ ಹಲವು ಜನಪ್ರತಿನಿಧಿಗಳು 

ಟ್ರೀ ಪಾರ್ಕ್ ಗಳ ನಿರ್ಮಾಣದಿಂದಾಗಿ ತುರಹಳ್ಳಿ ಪ್ರದೇಶದ ಸ್ಥಿತಿ-ಗತಿಗಳಿಗೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ಅದು ಸಣ್ಣ ಅರಣ್ಯವಾಗಿಯೇ ಉಳಿಯುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈಗಾಗಲೇ ಹಲವು ಪ್ರದೇಶಗಳಲ್ಲಿ ವಜ್ಯಜೀವಿ ಸಂಚಾರ-ಮಾನವ ಸಂಚಾರಕ್ಕೂ ಘರ್ಷಣೆ ಉಂಟಾಗಿ ಸಮಸ್ಯೆಯಾಗತೊಡಗಿವೆ. ಆದರೆ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ವಜ್ಯಜೀವಿ ಸಂಚಾರ ಇರದೇ ಇರುವ ಪ್ರದೇಶವನ್ನು ಗುರುತಿಸಿ ಟ್ರೀ ಪಾರ್ಕ್ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಹಾಳಾಗುತ್ತಿದ್ದ ಲಂಗ್ ಸ್ಪೇಸ್ ನ್ನು ಜನರ ಉಪಸ್ಥಿತಿಯಿಂದ ಹೇಗೆ ಉತ್ತಮಗೊಳಿಸಬಹುದೆಂಬುದಕ್ಕೆ ದೊರೆಸ್ವಾಮಿ ಪಾಳ್ಯದ ಚಿಟ್ಟೆ ಪಾರ್ಕ್ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಹಾಳಾಗುತ್ತಿದ್ದ ಲಂಗ್ ಸ್ಪೇಸ್ ನ್ನು ಉತ್ತಮಗೊಳಿಸಿ ಚಿಟ್ಟೆ ಪಾರ್ಕ್ ನ್ನಾಗಿ ಮಾಡಲಾಯಿತು ಎನ್ನುತ್ತಾರೆ ಅಧಿಕಾರಿಗಳು ಇದೇ ವೇಳೆ ಸಾರ್ವಜನಿಕರು ಹಾಗೂ ಇತರ ಅರಣ್ಯ ಅಧಿಕಾರಿಗಳು ತುರಹಳ್ಳಿ ಪ್ರದೇಶದಲ್ಲಿ ಟ್ರೀ ಪಾರ್ಕ್ ಮಾಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಈಗಿರವ ಅರಣ್ಯ ಪ್ರದೇಶವನ್ನು ಟ್ರೀ ಪಾರ್ಕ್ ಮಾಡಲು ಹೊರಟಿರುವ ಉದ್ದೇಶವನ್ನು ಪ್ರಶ್ನಿಸಿದ್ದಾರೆ. 

ಟ್ರೀ ಪಾರ್ಕ್ ನ ಉದ್ದೇಶಗಳು ಹೊಸದಾಗಿ ಲಂಗ್ ಸ್ಪೇಸ್ ಗಳನ್ನು ಸೃಷ್ಟಿಸುವುದಾಗಿರಬೇಕೆ ಹೊರತು ಈಗಿರುವುದನ್ನು ಹಾಳು ಮಾಡುವುದಲ್ಲ, ಅನುಪಯುಕ್ತ ಪ್ರದೇಶಗಾಳಲ್ಲಿ ಟ್ರೀ ಪಾರ್ಕ್ ನ್ನು ನಿರ್ಮಿಸಬೇಕೆಂಬ ಸರ್ಕಾರದ ಈ ಹಿಂದಿನ ಆದೇಶವನ್ನು ಸರ್ಕಾರವೇ ಮರೆತಂತೆ ಇದೆ ಎನ್ನುತ್ತಾರೆ ಕನಕಪುರ ರಸ್ತೆಯ ನಿವಾಸಿ ಹರಿ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp