ಮಂಗಳೂರು ವಿಮಾನ ನಿಲ್ದಾಣದಲ್ಲಿ 2.15 ಕೆಜಿ ಚಿನ್ನ ವಶ: ಇಬ್ಬರ ಬಂಧನ
ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿ, ಅವರಿಂದ ಸುಮಾರು 1.09 ಕೋಟಿ ರೂ. ಮೌಲ್ಯದ 2.15 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
Published: 15th January 2021 01:49 PM | Last Updated: 15th January 2021 01:57 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿ, ಅವರಿಂದ ಸುಮಾರು 1.09 ಕೋಟಿ ರೂ. ಮೌಲ್ಯದ 2.15 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕರ ಗುಪ್ತಚರ ಮತ್ತು ಪ್ರೊಫೈಲಿಂಗ್ ಆಧರಿಸಿ, ಕೇರಳದ ಕಾಸಗೋಡು ಮೂಲದ ಫೈಜಲ್ ತೊಟ್ಟಿ ಮೆಲ್ಪಾರಂಬಾ (37) ಮತ್ತು ಮೊಹಮ್ಮದ್ ಶುಹೈಬ್ ಮುಗು (31) ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿಯುವ ಮೂಲಕ ಕಳ್ಳತನವನ್ನು ತಡೆಹಿಡಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಂಧಿತರಿಬ್ಬರ ಶೋಧ ನಡೆಸಿದಾಗ ತಮ್ಮ ಒಳ ಉಡುಪುಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಚಿ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, 1.09 ಕೋಟಿ ರೂ.ಗಳ ಮೌಲ್ಯದ 24 ಕೆ ಶುದ್ಧತೆಯ ಒಟ್ಟು 2.15 ಕೆಜಿಯಷ್ಟು ಚಿನ್ನ ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನಸ್ ಜಾರ್ಜ್,ಅವರು ತಂಡವನ್ನು ಅಭಿನಂದಿಸಿದ್ದಾರೆ.
ಕಳ್ಳಸಾಗಣೆ ತಡೆಗಟ್ಟಲು ಜಿಲ್ಲಾಧಿಕಾರಿ ಪ್ರವೀಣ್ ಕಂಡಿ ನೇತೃತ್ವದ ಕಸ್ಟಮ್ಸ್ ತಂಡವನ್ನು ಮತ್ತು ಅಧಿಕಾರಿಗಳಾದ ಶ್ರೀಕಾಂತ್ ಕೆ, ಅಧೀಕ್ಷಕ, ಸುಭೇಂಡು ರಂಜನ್ ಬೆಹೆರಾ, ಅಧೀಕ್ಷಕರು, ನವೀನ್ ಕುಮಾರ್, ಅಧೀಕ್ಷಕರು ಮತ್ತು ಇತರರು ನಡೆಸಿದ ಕಾರ್ಯಾಚರಣೆಯನ್ನು ಕಸ್ಟಮ್ಸ್ ಕಮಿಷನರ್, ಇಮಾಮುದ್ದೀನ್ ಅಹ್ಮದ್ ಮತ್ತು ಜಂಟಿ ಆಯುಕ್ತ ಜೊವಾನ್ಸ್ ಜಾರ್ಜ್ ಅಭಿನಂದಿಸಿದ್ದಾರೆ.