ಕೊರೋನಾ ಲಸಿಕೆ ವಿತರಣೆಗೆ ಸಿಎಂ ಯಡಿಯೂರಪ್ಪ ಚಾಲನೆ; ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ನಾಗರತ್ನಗೆ ಮೊದಲ ಲಸಿಕೆ
ಕೊರೋನಾ ಲಸಿಕೆ ಅಭಿಯಾನಕ್ಕೆ ಜ.16 ರಿಂದ ಚಾಲನೆ ದೊರೆತಿದ್ದು ರಾಜ್ಯದಲ್ಲಿ ಕೆ.ಸಿ ಜನರಲ್ ಆಸ್ಪತ್ರೆಯ ಡಿ ಗ್ರೂಪ್ ನೌಕರನಿಗೆ ಮೊದಲ ಕೊರೋನಾ ಲಸಿಕೆಯನ್ನು ನೀಡಲಾಗಿದೆ.
Published: 16th January 2021 11:48 AM | Last Updated: 16th January 2021 01:07 PM | A+A A-

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
ಬೆಂಗಳೂರು: ಕೊರೋನಾ ಲಸಿಕೆ ಅಭಿಯಾನಕ್ಕೆ ಜ.16 ರಿಂದ ಚಾಲನೆ ದೊರೆತಿದ್ದು ರಾಜ್ಯದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡಲಾಯಿತು. ಇದರೊಂದಿಗೆ ರಾಜ್ಯಾದ್ಯಂತ ಲಸಿಕೆ ವಿತರಣೆ ಕಾರ್ಯ ಅಧಿಕೃತವಾಗಿ ಚಾಲನೆ ಪಡೆದುಕೊಂಡಿತು.
ಸಿಎಂ ಯಡಿಯೂರಪ್ಪ ಹಾಗೂ ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಇದೇ ವೇಳೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿರುವ ಚಂದ್ರಶೇಖರ್ಗೂ ಲಸಿಕೆಯನ್ನು ನೀಡಲಾಯಿತು ನಂತರ ಅರ್ಧ ಗಂಟೆ ಕಾಲ ಅವರ ಮೇಲೆ ನಿಗಾ ವಹಿಸಲಾಗಿತ್ತು.
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಇಂದು ಮುಖ್ಯಮಂತ್ರಿ @BSYBJP ರವರು ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡುವ ಮೂಲಕ ರಾಜ್ಯಾದ್ಯಂತ ಲಸಿಕೆ ವಿತರಣೆ ಅಧಿಕೃತವಾಗಿ ಚಾಲನೆ ನೀಡಲಾಯಿತು. (1/2)#LargestVaccinationDrive pic.twitter.com/JJMiuou9c2
— CM of Karnataka (@CMofKarnataka) January 16, 2021
" ನನಗೆ ಈ ಹಿಂದೆ ಕೊರೋನಾ ಬಂದು ಹೋಗಿತ್ತು, ಹಾಗಾಗಿ ಲಸಿಕೆ ಪಡೆದೆ, ನನ್ನೊಂದಿಗೆ ವೈದ್ಯರು ಇದ್ದಾರೆ, ಲಸಿಕೆ ಪಡೆಯುವುದಕ್ಕೆ ಯಾವುದೇ ಭಯ ಬೇಡ, ಭಯ ಪಡದೇ ಲಸಿಕೆ ಪಡೆಯಲು ಮುಂದೆ ಬನ್ನಿ" ಎಂದು ಚಂದ್ರಶೇಖರ್ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಇನ್ನು ಮಲ್ಲಸಂದ್ರದ ಸರ್ಕಾರಿ ಆಸ್ಪತ್ರೆ ವೈದ್ಯೆಯಾಗಿರುವ ಡಾ.ಕೋಮಲಾ ರಾಜ್ಯದಲ್ಲಿ ಕೊರೋನಾ ಲಸಿಕೆ ಪಡೆದಿರುವ 2 ನೇ ವ್ಯಕ್ತಿಯಾಗಿದ್ದರೆ ಮೂರನೆಯದ್ದಾಗಿ ವಿಕ್ಟೋರಿಯಾದ ನರ್ಸ್ ಗೆ ನೀಡಲಾಗಿದೆ.