ಧಾರವಾಡ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆ: 4 ಗಂಟೆಗಳಲ್ಲಿ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ರವಾನೆ 

ಧಾರವಾಡ ಸಮೀಪ ನಿನ್ನೆ ಶುಕ್ರವಾರ ಸಂಭವಿಸಿದ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವಿನ ಭೀಕರ ಅಪಘಾತದಲ್ಲಿ ಗಾಯಗೊಂಡ ಮಹಿಳಾ ಪ್ರಯಾಣಿಕರೊಬ್ಬರನ್ನು ಏರ್ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ.

Published: 16th January 2021 08:54 AM  |   Last Updated: 16th January 2021 09:04 AM   |  A+A-


The accident survivor, a 47-year-old woman was airlifted to Bengaluru on Friday evening from Hubballi airport for further treatment.

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಸಾಗಿಸಿರುವುದು

Posted By : Sumana Upadhyaya
Source : The New Indian Express

ಹುಬ್ಬಳ್ಳಿ: ಧಾರವಾಡ ಸಮೀಪ ನಿನ್ನೆ ಶುಕ್ರವಾರ ಸಂಭವಿಸಿದ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವಿನ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಏರ್ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ.

ಅಪಘಾತ ದುರಂತದಲ್ಲಿ ಈ ರೀತಿ ಗಂಭೀರವಾಗಿ ಗಾಯಗೊಳ್ಳುವವರನ್ನು ನೋಡಿಕೊಳ್ಳುವ ನುರಿತ ವೈದ್ಯರ ತಂಡ ಹುಬ್ಬಳ್ಳಿಗೆ ಆಗಮಿಸಿ ಬೆಂಗಳೂರಿಗೆ ಮಹಿಳೆಯನ್ನು ಕರೆತಂದಿದ್ದಾರೆ. ಮಹಿಳೆಯನ್ನು ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಬದುಕುಳಿದ ಮಹಿಳೆಯನ್ನು ಬೆಂಗಳೂರಿಗೆ ಕರೆತರುವುದು ಸವಾಲಿನ ಕೆಲಸವಾಗಿತ್ತು, ವೈದ್ಯರ ತಂಡ ಚೆನ್ನಾಗಿ ನಿಭಾಯಿಸಿದೆ ಎಂದು ಐಸಿಎಟಿಟಿ ಸ್ಥಾಪಕ ಅಧ್ಯಕ್ಷೆ ಡಾ ಶಾಲಿನಿ ನಲವಾಡ್ ತಿಳಿಸಿದ್ದಾರೆ.

ಮಹಿಳೆಯನ್ನು ಸ್ಥಿರವಾಗಿ ಆಂಬ್ಯುಲೆನ್ಸ್ ನಲ್ಲಿ ಮಲಗಿಸಿ ಅವರ ಆರೋಗ್ಯ ಹಿನ್ನೆಲೆ ತಿಳಿದುಕೊಂಡು ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಬೆಂಗಳೂರಿನಲ್ಲಿರುವ ನಮ್ಮ ಕಮಾಂಡ್ ಕೇಂದ್ರದ ಮೂಲಕ ಹುಬ್ಬಳ್ಳಿ ತಲುಪಿದೆವು. ನಿನ್ನೆ ಸಾಯಂಕಾಲ ಏರ್ ಆಂಬ್ಯುಲೆನ್ಸ್ ನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದಿಳಿದೆವು. 47 ವರ್ಷದ ಮಹಿಳೆಯ ತಲೆಗೆ ವಿಪರೀತ ಏಟಾಗಿದ್ದು, ಏರೋಮೆಡಿಕಲ್ ಕಮಾಂಡೊಗಳ ನಿರಂತರ ಸಂಪರ್ಕದಲ್ಲಿದ್ದರು ಎಂದು ಶಾಲಿನಿ ನಲವಾಡ ಹೇಳಿದರು.

ಸದ್ಯ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಬೆಂಗಳೂರಿನಲ್ಲಿ ಶೀಘ್ರವಾಗಿ ಕರೆತರಲು ಹೆಚ್ ಎಎಲ್ ವಿಮಾನ ನಿಲ್ದಾಣ ಮತ್ತು ಮಣಿಪಾಲ್ ಆಸ್ಪತ್ರೆ ಮಧ್ಯೆ ಗ್ರೀನ್ ಕಾರಿಡಾರ್ ಸೃಷ್ಟಿಸಿ ಕರೆತರಲಾಯಿತು ಎಂದರು. 

ಮತ್ತೊಬ್ಬ ಗಾಯಗೊಂಡ ಮಹಿಳೆ ಆಶಾ ಬೆಟೂರು ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಫ್ರಾಕ್ಛರ್ ಆಗಿದೆ. ಅವರು ಮತ್ತು ಮತ್ತಿಬ್ಬರು ಬದುಕುಳಿದವರು ಅಪಘಾತ ಸಂದರ್ಭದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. 

ಟ್ರಕ್ ಚಾಲಕ ಬಸವರಾಜ್ ಕದ್ರೊಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp