ಮೋದಿ ನೇತೃತ್ವದ ಭಾರತ ಕೊರೋನಾ ವಿರುದ್ಧದ ಹೋರಾಟದಲ್ಲಿ ಅತ್ಯಂತ ಯಶಸ್ವಿಯಾಗಿದೆ: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ವಿಶ್ವದಲ್ಲಿ ಕೊರೋನಾ ವೈರಸ್ ವಿರುದ್ಧ ಅತ್ಯಂತ ಯಶಸ್ವಿ ಹೋರಾಟ ನಡೆಸಿದ್ದು, ವ್ಯಾಕ್ಸಿನೇಷನ್ ಚಾಲನೆಯ ಆರಂಭದೊಂದಿಗೆ ದೇಶವು ಸಾಂಕ್ರಾಮಿಕ ರೋಗದ....

Published: 16th January 2021 07:26 PM  |   Last Updated: 16th January 2021 07:26 PM   |  A+A-


shah-smg

ಭದ್ರಾವತಿಯಲ್ಲಿ ಅಮಿತ್ ಶಾ

Posted By : Lingaraj Badiger
Source : PTI

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ವಿಶ್ವದಲ್ಲಿ ಕೊರೋನಾ ವೈರಸ್ ವಿರುದ್ಧ ಅತ್ಯಂತ ಯಶಸ್ವಿ ಹೋರಾಟ ನಡೆಸಿದ್ದು, ವ್ಯಾಕ್ಸಿನೇಷನ್ ಚಾಲನೆಯ ಆರಂಭದೊಂದಿಗೆ ದೇಶವು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಅಂತಿಮ ಹಂತಕ್ಕೆ ಕೊಂಡೊಯ್ದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.

ಇಂದು ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯ ಪಡೆ(ಆರ್‍ಎಎಫ್) 97 ಬೆಟಾಲಿಯನ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಸುಮಾರು ಒಂದು ವರ್ಷದಿಂದ ಇಡೀ ಜಗತ್ತು ಕೊರೋನಾದ ವಿರುದ್ಧ ಹೋರಾಡುತ್ತಿದೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜ್ಞಾನ, ಆವಿಷ್ಕಾರಗಳು ಮತ್ತು ಪರಸ್ಪರ ಸಹಕಾರವನ್ನು ಬಳಸಿಕೊಂಡು ಮನುಷ್ಯರು ನಡೆಸಿದ ಕಠಿಣ ಹೋರಾಟಗಳಲ್ಲಿ ಇದು ಸಹ ಒಂದು ಎಂದಿದ್ದಾರೆ.

ದೇಶವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಮೋದಿ ನೇತೃತ್ವದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಹಂತವನ್ನು ದಾಟಿದೆ. ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನವು ವಿಜ್ಞಾನಿಗಳ ಅಪಾರ ಸಾಮರ್ಥ್ಯ ಮತ್ತು ನಾಯಕತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ದೇಶವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಹಂತವನ್ನು ದಾಟಿದೆ. ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನವು ವಿಜ್ಞಾನಿಗಳ ಅಪಾರ ಸಾಮರ್ಥ್ಯ ಮತ್ತು ನಾಯಕತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದರು.

ಈ ಅಭೂತಪೂರ್ವ ಸಾಧೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಿದೆ. ಇದು ಜಗತ್ತಿನಲ್ಲಿ ಸ್ವಾವಲಂಬಿ ನವ ಭಾರತದ ಉದಯವಾಗಿದೆ. ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು' ಎಂದು ತಿಳಿಸಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp