ಸ್ಥಳೀಯ ಸಂಸ್ಥೆ ನೌಕರರಿಗೂ ಜ್ಯೋತಿ ಸಂಜೀವಿನಿ ವಿಸ್ತರಣೆ: ಸಚಿವ ನಾರಾಯಣಗೌಡ

ನಗರ ಸ್ಥಳೀಯ ಸಂಸ್ಥೆ ನೌಕರರಿಗೆ ಜ್ಯೋತಿ ಸಂಜಿವಿನಿ ಆರೋಗ್ಯ ಸುರಕ್ಷಾ ಯೋಜನೆ ವಿಸ್ತರಿಸುವ ಕುರಿತು ಸಚಿವ ನಾರಾಯಣ ಗೌಡ ಅವರು ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡದರು. 

Published: 16th January 2021 08:23 PM  |   Last Updated: 16th January 2021 08:23 PM   |  A+A-


Narayana gowda

ನಾರಾಯಣ ಗೌಡ

Posted By : Lingaraj Badiger
Source : UNI

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ನೌಕರರಿಗೆ ಜ್ಯೋತಿ ಸಂಜಿವಿನಿ ಆರೋಗ್ಯ ಸುರಕ್ಷಾ ಯೋಜನೆ ವಿಸ್ತರಿಸುವ ಕುರಿತು ಸಚಿವ ನಾರಾಯಣ ಗೌಡ ಅವರು ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡದರು. 

ಈ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು, ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ತಳೀಯ ಸಂಸ್ಥೆ ನೌಕರರ ಸಂಘದವರು ಹಾಗೂ ಅಧಿಕಾರಿಗಳ ಜೊತೆ ಸಚಿವರು ಈ ಸಂಬಂಧ ಸಭೆ ನಡೆಸಿದರು. ಸಚಿವರು ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸುವ ಮೂಲಕ ಪೌರಕಾರ್ಮಿಕರ ಮೊಗದಲ್ಲಿ ನಗು ಅರಳುವಂತೆ ಮಾಡಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕೆಜಿಐಡಿ ಮತ್ತು ಜಿಪಿಎ ಫ್ ಸೌಲಭ್ಯ ಅಳವಡಿಸಲು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಲು 15 ದಿನಗಳ ಒಳಗೆ ವರದಿ ನೀಡಲು ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು.

ನೌಕರರ ಖಾಯಂಮಾತಿ ಬಗ್ಗೆ 2017ರ ಹಿಂದಿನ ಅರ್ಹತೆಗೆ ಅನುಗುಣವಾಗಿ ಸಕ್ರಮ ಮಾಡಬೇಕು ಇಲ್ಲವೇ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾ ಭಿವೃದ್ಧಿ ನಿಯಮಕ್ಕೆ ತಿದ್ದುಪಡಿ ತಂದು DPAR,DPAL ಮತ್ತು ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ಒಂದು ತಿಂಗಳ ಒಳಗಾಗಿ ಕರಡು ರಚಿಸಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ 3,500ರೂ ವಿಶೇಷ ಭತ್ಯೆ ನೀಡುತ್ತಿದ್ದು, ಅದನ್ನ 7 ಸಾವಿರ ರೂ.ಗೆ ಏರಿಕೆ ಮಾಡುವಂತೆಯೂ ಸಚಿವ ನಾರಾಯಣಗೌಡ ಆದೇಶಿಸಿದ್ದಾರೆ. ಕೋವಿಡ್-19ನಿಂದ ಮೃತಪಟ್ಟ ಸ್ಥಳೀಯ ಸಂಸ್ಥೆ ನೌಕರರಿಗೆ 30ಲಕ್ಷ ರೂ.ಪರಿಹಾರ ನೀಡುತ್ತಿದ್ದು, ಇತರೆ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರಿಗೂ ಈ ಸೌಲಭ್ಯ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಪೌರಸೇವಾ ವೃಂದದ ನೌಕರರು ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ಶವಸಂಸ್ಕಾರಕ್ಕೆ ನೀಡುತ್ತಿರು ವ 7,500 ರೂ ಸಹಾಯಧನವನ್ನು ದ್ವಿಗುಣಗೊಳಿಸಲು ಪರಿಶೀಲಿಸಲಾಗು ವುದು ಎಂದು ಸಚಿವರು ತಿಳಿಸಿದರು. 

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp