ಸಂಸದರ ನಿಧಿಯಲ್ಲಿ ಸಂವಿಧಾನದ ಪುಸ್ತಕ ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಮುಂದಾದ ಶ್ರೀನಿವಾಸ್ ಪ್ರಸಾದ್

ಹಿರಿಯ ರಾಜಕಾರಣಿ ಮತ್ತು ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಚಮರಾಜ್‌ನಗರ ಲೋಕಸಭಾ ಕ್ಷೇತ್ರದ ಪದವಿ ಪೂರ್ವ ಕಾಲೇಜಿನ ಸುಮಾರು 12,000 ವಿದ್ಯಾರ್ಥಿಗಳಿಗೆ 'ಸಂವಿದನ ಓದಿ' (ಸಂವಿಧಾನದ ಪುಸ್ತಕ) ಪುಸ್ತಕ ವಿತರಿಸಲಿದ್ದಾರೆ.

Published: 16th January 2021 07:53 PM  |   Last Updated: 16th January 2021 07:53 PM   |  A+A-


Contesting because Siddaramaiah humiliated me, says Srinivasa Prasad

ಶ್ರೀನಿವಾಸ್ ಪ್ರಸಾದ್

Posted By : Lingaraj Badiger
Source : The New Indian Express

ಬೆಂಗಳೂರು: ಹಿರಿಯ ರಾಜಕಾರಣಿ ಮತ್ತು ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಚಮರಾಜ್‌ನಗರ ಲೋಕಸಭಾ ಕ್ಷೇತ್ರದ ಪದವಿ ಪೂರ್ವ ಕಾಲೇಜಿನ ಸುಮಾರು 12,000 ವಿದ್ಯಾರ್ಥಿಗಳಿಗೆ 'ಸಂವಿದನ ಓದಿ' (ಸಂವಿಧಾನದ ಪುಸ್ತಕ) ಪುಸ್ತಕ ವಿತರಿಸಲಿದ್ದಾರೆ.

ಈ ಪುಸ್ತಕಗಳ ಮುದ್ರಣಕ್ಕೆ ಸಂಸದರ ನಿಧಿ ಬಳಸಿಕೊಳ್ಳುವುದಾಗಿ ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಾರೆ.

ಆರು ಬಾರಿ ಸಂಸದರಾಗಿರುವ ಶ್ರೀನಿವಾಸ್ ಪ್ರಸಾದ್ ಅವರು, ಈ ಹಿಂದೆ ಸಂಸದರ ನಿಧಿಯ ಹಣವನ್ನು ಎಲ್ಲಾ ತಾಲ್ಲೂಕುಗಳಲ್ಲೂ ಅತ್ಯುತ್ತಮ ಮೂಲಸೌಕರ್ಯ, ಓದುವ ಕೋಣೆ ಮತ್ತು ಗ್ರಂಥಾಲಯ ಹೊಂದಿದ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಬಳಸಿಕೊಂಡಿದ್ದರು.

ಆ ಅಂಬೇಡ್ಕರ್ ಭವನಗಳನ್ನು ಈಗ ಸ್ಪರ್ಧಾತ್ಮಕ ಪರೀಕ್ಷೆಗ ತರಬೇತಿಗೆ ಮತ್ತು ವಿವಾಹಗಳ ಸಮಾರಂಭ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಂವಿಧಾನದ ಪುಸ್ತಕದ ಬಗ್ಗೆ ನಾನು ಪ್ರಭಾವಿತನಾಗಿದ್ದು, ಈ ಪುಸ್ತಕವನ್ನು ಸರಳ ಭಾಷೆಯಲ್ಲಿ ಬರೆಯಲಾಗಿದೆ. ವಿದ್ಯಾರ್ಥಿಗಳಿದೆ ಸುಲಭವಾಗಿ ಅರ್ಥವಾಗುತ್ತದೆ. ಈ ಪುಸ್ತಕವನ್ನು ಮುದ್ರಿಸಲು ಮತ್ತು ವಿದ್ಯಾರ್ಥಿಗಳಿಗೆ ವಿತರಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅನುಮತಿ ಕೇಳಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp