ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿವೆಯೇ? ಹಾಗಾದರೇ ಫೋಟೋ ಕ್ಲಿಕ್ಕಿಸಿ ಹೈಕೋರ್ಟ್ ಗೆ ಕಳುಹಿಸಿ!
ನಾಗರಿಕರು ಕೆಟ್ಟ ರಸ್ತೆಗಳ ಚಿತ್ರಗಳನ್ನು ಕಳುಹಿಸಬಹುದಾದ ವಾಟ್ಸಾಪ್ ಸಂಖ್ಯೆಯನ್ನು ನೀಡಿದ ಎರಡು ದಿನಗಳಲ್ಲಿ, 200 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ
Published: 16th January 2021 11:56 AM | Last Updated: 16th January 2021 11:56 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಗರಿಕರು ಕೆಟ್ಟ ರಸ್ತೆಗಳ ಚಿತ್ರಗಳನ್ನು ಕಳುಹಿಸಬಹುದಾದ ವಾಟ್ಸಾಪ್ ಸಂಖ್ಯೆಯನ್ನು ನೀಡಿದ ಎರಡು ದಿನಗಳಲ್ಲಿ, 200 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ
ಕಳಪೆ ಸ್ಥಿತಿಯಲ್ಲಿರುವ ರಸ್ತೆಗಳ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ. ರಸ್ತೆ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಅದನ್ನು ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಮತ್ತು ಎನ್ಜಿಒ ರೀಪ್ ಬೆನಿಫಿಟ್ ಜೊತೆಗೆ ಅನೇಕ ಕಲ್ಯಾಣ ಸಂಘಗಳು, ನಾಗರಿಕ ಸಂಸ್ಥೆಗಳು ಈ ಕ್ರಮವನ್ನು ಪ್ರಾರಂಭಿಸಿದವು.
ರಸ್ತೆಗಳ ಪ್ರಸ್ತುತ ಸ್ಥಿತಿಯನ್ನು ಗುರುತಿಸಲು ಪ್ಯಾರಾಲಿಗಲ್ಗಳು, ನಿವಾಸಿ ಸ್ವಯಂಸೇವಕರು ಮತ್ತು ವಕೀಲರ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಡಿಸೆಂಬರ್ 17 ರಂದು ಕೆಎಸ್ಎಲ್ಎಸ್ಎ ಮತ್ತು ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿತು.
ಇದನ್ನು ಕಾರ್ಯಗತಗೊಳಿಸಲು, ಕೆಎಸ್ಎಲ್ಎಸ್ಎ ಒಂದು ಸಭೆಯನ್ನು ನಡೆಸಿತು, ಈ ಸಂದರ್ಭದಲ್ಲಿ ಅನೇಕ ಸ್ವಯಂಸೇವಕರು ಕೈಜೋಡಿಸಲು ಒಪ್ಪಿದರು ಮತ್ತು ವಾಟ್ಸಾಪ್ ಸಂಖ್ಯೆಯನ್ನು ಹೊರತರಲು ನಿರ್ಧರಿಸಲಾಯಿತು.
ಜನರು ಬೆಂಗಳೂರಿನಿಂದ ರಸ್ತೆಗಳ ಬಗ್ಗೆ ಮಾಹಿತಿಯನ್ನು ಕಳುಹಿಸುತ್ತಿದ್ದಾರೆ, ಆದರೆ ಹೆಚ್ಚಿನ ಕೆಟ್ಟ ರಸ್ತೆಗಳು ನಗರದ ಹೊರವಲಯದಿಂದ ವರದಿಯಾಗುತ್ತಿವೆ, ಪ್ರತಿ ಬಿಬಿಎಂಪಿ ವಲಯಕ್ಕಾಗಿ ಒಂದೊಂದು ತಂಡ ರಚಿಸಲಾಗಿದೆ.
ಪ್ರತಿಯೊಂದು ತಂಡದಲ್ಲಿ ಸ್ವಯಂಸೇವಕರು, ಕಾನೂನು ತಜ್ಞರು, ವಕೀಲರು, ಎನ್ಜಿಒಗಳು ಮತ್ತು ಆರ್ಡಬ್ಲ್ಯೂಎಗಳನ್ನು ಒಳಗೊಂಡಿದೆ. ನ್ಯಾಯಾಲಯದ ವಿಚಾರಣೆ ಫೆಬ್ರವರಿ 5 ರಂದು ಇರುವುದರಿಂದ ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಜನವರಿ 31 ಆಗಿದೆ. ಅಪ್ಲಿಕೇಶನ್ ಮತ್ತು ಸಂಖ್ಯೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕೆ ಮತ್ತು ಜನರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಬೇಕೆ ಎಂದು ನ್ಯಾಯಾಲಯ ನಿರ್ಧರಿಸುತ್ತದೆ, ”ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಈ ಸಮಿತಿಯು ಪ್ರತಿಕ್ರಿಯೆಯನ್ನು ಒಟ್ಟುಗೂಡಿಸಿದ್ದು, ಇದರಲ್ಲಿ ಹೆಚ್ಚಿನ ದೂರು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ್ದಾಗಿದೆ. ಆದಾಗ್ಯೂ, ನಾಗರಿಕರು ಅಸ್ಪಷ್ಟ ರಸ್ತೆಗಳ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದಾರೆ. "ಇದೇ ಮೊದಲ ಬಾರಿಗೆ ಏನಾದರೂ ಮಾಡಲಾಗಿದೆ. ವಾಟ್ಸಾಪ್ ಸಂಖ್ಯೆಯನ್ನು ಮಾತ್ರ ಪ್ರಸಾರ ಮಾಡಲಾಗುತ್ತಿದೆ. ಇದನ್ನು ಕೆಎಸ್ಎಲ್ಎಸ್ಎ ವೆಬ್ಸೈಟ್ನಲ್ಲಿಯೂ ಪ್ರಕಟಿಸಲಾಗಿದೆ.
ಒಂದೆರಡು ದಿನಗಳಲ್ಲಿ, ವೆಬ್ ಅಪ್ಲಿಕೇಶನ್ ಸಾಲ್ವ್ ನಿಂಜಾ ಕೂಡ ಪ್ರಾರಂಭಿಸಲಾಗುವುದು. ಜನರು ಫಾರ್ಮ್ಗಳನ್ನು ಭರ್ತಿ ಮಾಡಿ ಅವರ ಕುಂದುಕೊರತೆಗಳನ್ನು ಛಾಯಾಚಿತ್ರಗಳು ಮತ್ತು ಸ್ಥಳದೊಂದಿಗೆ ಅಪ್ಲಿಕೇಶನ್ಗೆ ಅಪ್ಲೋಡ್ ಮಾಡಬಹುದು ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.