ಮಂಗಳೂರು ವಿಮಾನ ನಿಲ್ದಾಣಕ್ಕೆ ಎಸಿಐ ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ಕ್ಕೆ ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ ದೊರಕಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವಿಮಾನ ನಿಲ್ದಾಣ ಜಾರಿಗೆ ತಂದಿರುವ ಅಸಾಧಾರಣ ಪೂರ್ವಭಾವಿ ಕ್ರಮಗಳನ್ನು ಗುರುತಿಸಿ ಈ ಮಾನ್ಯತೆ ನೀಡಲಾಗಿದೆ.
Published: 18th January 2021 01:57 PM | Last Updated: 18th January 2021 02:40 PM | A+A A-

ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ಕ್ಕೆ ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ ದೊರಕಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವಿಮಾನ ನಿಲ್ದಾಣ ಜಾರಿಗೆ ತಂದಿರುವ ಅಸಾಧಾರಣ ಪೂರ್ವಭಾವಿ ಕ್ರಮಗಳನ್ನು ಗುರುತಿಸಿ ಈ ಮಾನ್ಯತೆ ನೀಡಲಾಗಿದೆ.
ಇನ್ನು ಮಂಗಳೂರು ಮಾತ್ರವಲ್ಲದೆ ಅಹಮದಾಬಾದ್ ಮತ್ತು ಲಖನೌ ವಿಮಾನ ನಿಲ್ದಾಣಗಳು ಸಹ ಎಸಿಐನ ಈ ಮಾನ್ಯತೆಯ ಹೆಗ್ಗುರುತಿಗೆ ಪಾತ್ರವಾಗಿದೆ.
118 ಚೆಕ್ ಪಾಯಿಂಟ್ಗಳ ಆಧಾರದ ಮೇಲೆ ಪ್ರಸ್ತುತಪಡಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಎಎಚ್ಎ ಕಾರ್ಯಕ್ರಮದಡಿ ಎಸಿಐ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸಿಐ ಏವಿಯೇಷನ್ ಬಿಸಿನೆಸ್ ಇಸ್ಟಾರ್ಟ್ ಆಂಡ್ ರಿಕವರಿ ಮಾರ್ಗಸೂಚಿಗಳು ಮತ್ತು ಐಸಿಎಒ ಕೌನ್ಸಿಲ್ ಏವಿಯೇಷನ್ ರಿಕವರಿ ಟಾಸ್ಕ್ ಫೋರ್ಸ್ ರೆಕಮಂಡೇಷನ್ಸಡಿಯಲ್ಲಿ ಶಿಫಾರಸು ಮಾಡಲಾದ ಆರೋಗ್ಯ ಕ್ರಮಗಳಿಗೆ ಅನುಗುಣವಾಗಿ ವಿಮಾನ ನಿಲ್ದಾಣಗಳು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಅನುಭವವನ್ನು ಒದಗಿಸಿವೆ.
“ಈ ಮಾನ್ಯತೆ ಕೋವಿಡ್ -19 ಮತ್ತು ನಂತರದ ವ್ಯಾಕ್ಸಿನೇಷನ್ ಚಾಲನೆಯ ಹಿನ್ನೆಲೆಯಲ್ಲಿ ವಾಯು ಸಂಚಾರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ನಿಯಂತ್ರಣದ ನಡುವೆ ಲಖನೌ, ಅಹಮದಾಬಾದ್ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಜಾಗತಿಕ ಉತ್ತಮ ಅಭ್ಯಾಸಗಳೊಂದಿಗೆ ನಮ್ಮ ಸನ್ನದ್ಧತೆಯನ್ನು ಬಲಪಡಿಸಲು ನಾವು ಬದ್ಧರಾಗಿರುತ್ತೇವೆ " ಅದಾನಿ ವಿಮಾನ ನಿಲ್ದಾಣಗಳ ಸಿಇಒ ಬೆಹ್ನಾದ್ ಝೆಂಡಿ ಹೇಳಿದ್ದಾರೆ.
ಈ ಮಾನ್ಯತೆ ಮುಂದಿನ 12 ತಿಂಗಳುಗಳಿಗೆ ಮಾನ್ಯವಾಗಿರಲಿದೆ.ವಿಮಾನ ನಿಲ್ದಾಣದ ಸೌಲಭ್ಯಗಳು ಸುರಕ್ಷಿತವಾಗಿರುತ್ತವೆ ಮತ್ತು ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಯಾಣಿಕರಿಗೆ ಧೈರ್ಯ ತುಂಬಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಎಸಿಐ ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ (ಎಎಚ್ಎ) ಕಾರ್ಯಕ್ರಮವು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು, ಸಿಬ್ಬಂದಿ, ನಿಯಂತ್ರಕರು ಮತ್ತು ಸರ್ಕಾರಗಳಿಗೆ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದನ್ನು ಅಳೆಯಲು, ಸ್ಥಾಪಿತ ರೀತಿಯಲ್ಲಿ ಅನುವು ಮಾಡಿಕೊಡುತ್ತದೆ.