ನಂದಿನಿ ಮಿನಿ ಟ್ರಕ್ ಮೂಲಕ ಮನೆ ಬಾಗಿಲಿಗೆ ಹಾಲು ಸರಬರಾಜು!
ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನ ನಿತ್ಯದ ಪದಾರ್ಥಗಳವರೆಗೆ ಮನೆ ಬಾಗಿಲಿಗೇ ತಲುಪಿಸುವ ಸೇವೆಗಳ ಕೊರತೆ ಇಲ್ಲ. ಈಗ ಕೆಎಂಎಫ್ ಸಹ ಇಂಥಹದ್ದೇ ಸೇವೆಯನ್ನು ಪ್ರಾರಂಭಿಸಲು ಸಜ್ಜುಗೊಂಡಿದೆ.
Published: 18th January 2021 02:00 PM | Last Updated: 18th January 2021 02:41 PM | A+A A-

ನಂದಿನಿ ಮಿನಿ ಟ್ರಕ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಹಾಲು!
ಬೆಂಗಳೂರು: ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನ ನಿತ್ಯದ ಪದಾರ್ಥಗಳವರೆಗೆ ಮನೆ ಬಾಗಿಲಿಗೇ ತಲುಪಿಸುವ ಸೇವೆಗಳ ಕೊರತೆ ಇಲ್ಲ. ಈಗ ಕೆಎಂಎಫ್ ಸಹ ಇಂಥಹದ್ದೇ ಸೇವೆಯನ್ನು ಪ್ರಾರಂಭಿಸಲು ಸಜ್ಜುಗೊಂಡಿದೆ.
ಕೆಎಂಎಫ್ ಮನೆ ಬಾಗಿಲಿಗೇ ಹಾಲಿನ ಪ್ಯಾಕ್ ಗಳನ್ನು ತಲುಪಿಸಲು ಮದರ್ ಡೈರಿಯ ಜೊತೆ ಪಾಲುದಾರಿಗೆ ಮಾಡಿಕೊಂಡಿದ್ದು ನಂದಿನಿ ಆನ್ ವ್ಹೀಲ್ಸ್ ಸೇವೆಯನ್ನು ಪ್ರಾರಂಭಿಸಿದೆ. ಇದರಿಂದಾಗಿ ಜನತೆ ಮಿಲ್ಕ್ ಬೂತ್ ಗೆ ಹೋಗುವುದು ತಪ್ಪಲಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಯಲಹಂಕ ಝೋನ್ ನಲ್ಲಿ ಜ.18 ರಿಂದ ಜಾರಿಗೆ ಬಂದಿದೆ.
ಕೆಎಂಎಫ್ ನ ಹಾಲಿನ ವಾಹನಗಳು ಬೆಳಿಗ್ಗೆ 9 ರಿಂದ ರಾತ್ರಿ 8 ವರೆಗೆ ಹೊತ್ತು ಆ ಭಾಗಗಳಲ್ಲಿ ಸಂಚರಿಸಲಿವೆ, ದಾಸ್ತಾನು ಖಾಲಿಯಾದರೆ ಹತ್ತಿರದ ಪಾರ್ಲರ್ ಗಳಿಂದ ತುಂಬಿಸಿಕೊಂಡು ಸಾರ್ವಜನಿಕರಿಗೆ ವಿತರಣೆ ಮಾಡಲಿವೆ.
ಈಗಾಗಲೇ ಇಂತಹ 8 ಮಿನಿ ಟ್ರಕ್ ಗಳು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿವೆ. ಆದರೆ ಅವುಗಳನ್ನು ಮಂಡ್ಯ, ಬೆಂಗಳೂರು ಡೈರಿ, ಮಂಗಳೂರು ಹಾಗೂ ಇತರ ಹಾಲಿಕ ಒಕ್ಕೂಟಗಳು ಮುನ್ನಡೆಸುತ್ತಿವೆ. ಯಲಹಂಕದಲ್ಲಿನ ಸೇವೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರೀತಿಯ ಹೆಚ್ಚಿನ ಟ್ರಕ್ ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯಲ್ಲೂ ಇಂತಹ ವಾಹನಗಳು ಸಂಚರಿಸುತ್ತಿವೆ ಎಂದು ಮದರ್ ಡೈರಿಯ ಮಾರ್ಕೆಟಿಂಗ್ ಮ್ಯಾನೇಜರ್ ಯಲಹಂಕ ಝೋನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಡಿಮೆ ಮಿಲ್ಕ್ ಪಾರ್ಲರ್ ಗಳು ಇರುವುದರಿಂದ ಈ ರೀತಿಯ ವಾಹನಗಳನ್ನು ಪ್ರಾಯೋಗಿಕವಾಗಿ ಮೂರು ತಿಂಗಳವರೆಗೆ ಪರಿಚಯಿಸಲಾಗುತ್ತಿದೆ, ಪ್ರತಿಕ್ರಿಯೆ ಬಂದ ನಂತರ ಒಂದು ವರ್ಷದವರೆಗೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.