ಲಸಿಕೆ ಪಡೆದಿದ್ದ ನೌಕರ ಸಾವನ್ನಪ್ಪಿದ್ದು ಹೃದಯಾಘಾತದಿಂದ: ಸಚಿವ ಸುಧಾಕರ್, ಆರೋಗ್ಯ ಇಲಾಖೆ ಸ್ಪಷ್ಟನೆ

ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಿದ ದಿನವೇ ಲಸಿಕೆ ಪಡೆದುಕೊಂಡಿದ್ದ ಸೆಂಡೂರಿನ ಸರ್ಕಾರಿ ಆಸ್ಪತ್ರೆ ಡಿ ದರ್ಜೆ ನೌಕರನೊಬ್ಬ ಕರ್ತವದಲ್ಲಿದ್ದಾಗಲೇ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದ್ದು, ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ನೌಕರನ ಸಾವಿಗೆ ಹೃದಯಾಘಾತವೇ ಹೊರತು ಲಸಿಕೆಯಲ್ಲ ಎಂದು ಹೇಳಿದ್ದಾರೆ. 

Published: 19th January 2021 08:58 AM  |   Last Updated: 19th January 2021 12:54 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬಳ್ಳಾರಿ: ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಿದ ದಿನವೇ ಲಸಿಕೆ ಪಡೆದುಕೊಂಡಿದ್ದ ಸೆಂಡೂರಿನ ಸರ್ಕಾರಿ ಆಸ್ಪತ್ರೆ ಡಿ ದರ್ಜೆ ನೌಕರನೊಬ್ಬ ಸೋಮವಾರ ಕರ್ತವದಲ್ಲಿದ್ದಾಗಲೇ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ನೌಕರನ ಸಾವಿಗೆ ಹೃದಯಾಘಾತವೇ ಹೊರತು ಲಸಿಕೆಯಲ್ಲ ಎಂದು ಹೇಳಿದ್ದಾರೆ. 

ಹೊಸಪೇಟೆ ತಾಲೂಕಿನ ಕಮಲಾಪುರ ನಿವಾಸಿ ನಾಗರಾಜ್ ಎಂಬುವವರು ಶನಿವಾರ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಸೋಮವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯದಲ್ಲಿದ್ದಾಗಲೇ ಬೆಳಿಗ್ಗೆ 11.30ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದರು. 

ರಾಜ್ಯದ್ಯಂತ ಕೋವಿಡ್ ಲಸಿಕೆ ಕೈಗೊಂಡಿದ್ದ ವೇಳೆ ಡಿ ದರ್ಜೆಯ ಸಾಕಷ್ಟು ನೌಕರರು ಸೆಂಡೂರಿನಲ್ಲಿ ಲಸಿಕೆ ಪಡೆದಿದ್ದು, ಅವರಲ್ಲಿ ನಾಗರಾಜ್ ಕೂಡ ಒಬ್ಬರಾಗಿದ್ದರು. ಲಸಿಕೆ ಪಡೆದ ಬಳಿಕ ಅವರು ಎಂದಿನಂತೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು. ಭಾನುವಾರವೂ ಕರ್ತವ್ಯಕ್ಕೆ ಹಾಜರಾಗಿದ್ದರು. ಆ ಸಮಯದಲ್ಲಿ ಅವರಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಹೇಳಲಾಗುತ್ತಿದೆ. ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. 

ಘಟನೆ ಬಳಿಕ ಲಸಿಕೆ ಪಡೆದಿದ್ದಕ್ಕೇ ವ್ಯಕ್ತಿ ಸಾವನ್ನಪ್ಪಿದ್ದಾರೆಂಬ ಸುದ್ದಿ ಹರಡಲು ಆರಂಭಿಸಿತ್ತು. ಅಲ್ಲದೆ, ಲಸಿಕೆ ಪಡೆದುಕೊಂಡ ಹಲವರಲ್ಲಿ ಆತಂಕ ಸೃಷ್ಟಿಯಾಗಿತ್ತು. 

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವರು, ನಾಗರಾಜ್ ಸಾವಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆಯೇ ಹೊರತು ಲಸಿಕೆಯ ಅಡ್ಡಪರಿಣಾಮಗಳಿಂದಾಗಿ ಅಲ್ಲ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ 30 ಸಾವಿರ ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. ಯಾರೊಬ್ಬರಿಗೂ ಏನೂ ಸಮಸ್ಯೆಯಾಗಿಲ್ಲ. ಮೃತ ನಾಗರಾಜ್ ಮಧುಮೇಹ, ಹೃದಯ ರೋಗದಿಂದ ಬಳಲುತ್ತಿದ್ದರು. ನಾಗರಾಜ್ ಲಸಿಕೆಯಿಂದ ಮೃತಪಟ್ಟಿದ್ದಾರೆಂದರೆ ವೈದ್ಯಲೋಕ ಒಪ್ಪುವುದೂ ಇಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಫೋರೆನ್ಸಿಕ್ ಲ್ಯಾಬ್ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ಕೂಡ ನಾಗರಾಜ್ ಸಾವಿಗೆ ಲಸಿಕೆ ಅಡ್ಡ ಪರಿಣಾ ಕಾರಣವಲ್ಲ ಎಂದಿದ್ದಾರೆ. 

ನಾಗರಾಜ್ ಮರಣೋತ್ತರ ಪರೀಕ್ಷೆಯನ್ನು ವಿಮ್ಸ್ ನಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp