ಉಡುಪಿ: ಹೆಜಮಾಡಿ ಕೊಡಿ ಮೀನುಗಾರಿಕೆ ಬಂದರು ಯೋಜನೆಗೆ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ
ಎರಡು ದಿನಗಳ ಉಡುಪಿ ಭೇಟಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಜನವರಿ 19) ಉಡುಪಿ ಜಿಲ್ಲೆ ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
Published: 19th January 2021 12:02 PM | Last Updated: 19th January 2021 12:59 PM | A+A A-

ಹೆಜಮಾಡಿ ಬಂದರು ಯೋಜನೆಗೆ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ
ಉಡುಪಿ: ಎರಡು ದಿನಗಳ ಉಡುಪಿ ಭೇಟಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಜನವರಿ 19) ಉಡುಪಿ ಜಿಲ್ಲೆ ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
180.8 ಕೋಟಿ ರೂ. ಯೋಜನೆಯ ಹೆಜಮಾಡಿ ಸರ್ವಋತು ಮೀನುಗಾರಿಕಾ ಬಂದರು ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಮೀನುಗಾರಿಕೆ ಇಲಾಖೆ ಅಧೀನದಲ್ಲಿರುವ ಸುಮಾರು 70 ಎಕರೆ ಜಾಗದಲ್ಲಿರುವ ಭೂಮಿಯಲ್ಲಿ ಮೀನುಗಾರಿಕೆ ಬಂದರಿಗಾಗಿ ಸುಸಜ್ಜಿತ ಮೀನುಗಾರಿಕಾ ಜಟ್ಟಿ, ಬ್ರೇಕ್ ವಾಟರ್ ಸೌಲಭ್ಯ, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್ ಮನ್ ಶೆಡ್, ಕಚೇರಿಗಳು ಸೇರಿದಂತೆ ಸುಸಜ್ಜಿತ ಬಂದರು ನಿರ್ಮಾಣವಾಗಲಿದೆ.
ಮುಖ್ಯಮಂತ್ರಿ @BSYBJP ರವರು ಇಂದು ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಗೆ ಶಂಕುಸ್ಥಾಪನೆ ನೆರೆವೇರಿಸಿದರು.
— CM of Karnataka (@CMofKarnataka) January 19, 2021
ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ @KotasBJP, ಶಾಸಕ ಲಾಲಾಜಿ.ಆರ್.ಮೆಂಡನ್, ಸಂಸದೆ @ShobhaBJP ಉಪಸ್ಥಿತರಿದ್ದರು. pic.twitter.com/UhCFU7bgyb
ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ರವರು ಇಂದು ಮೀನುಗಾರರಿಗೆ ಸಂಕಷ್ಟ ಪರಿಹಾರ, ಮತ್ಸ್ಯಾಶ್ರಯ ಯೋಜನೆ ಹಾಗೂ ಭಾಗ್ಯಲಕ್ಷ್ಮಿ ಯೋಜನೆಯಡಿ ಚೆಕ್ ವಿತರಿಸಿದರು
ಈ ಎಲ್ಲಾ ಕಾರ್ಯಕ್ರಮದ ನಡುವೆ ಮಾದ್ಯಮದವರೊಡನೆಮಾತನಾಡಿದ ಮುಖ್ಯಮಂತ್ರಿಗಳು "ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ. ಕರಂಬಳ್ಳಿ ವೆಂಕಟರಮಣ ದೇವಾಲಯ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದೇನೆ. ಇದಲ್ಲದೆ ಉಚ್ಚಿಲದ ಮಹಾಲಕ್ಷ್ಮಿ ದೇವಾಲಯಕ್ಕೂ ಭೇಟಿ ನೀಡಲಿದ್ದೇನೆ. ಇದೀಗ ಆನೆಗುಡ್ಡೆಯ ಶ್ರೀ ವಿನಾಯಕ ದೇವಾಲಯಕ್ಕೆ ತೆರಳುತ್ತಿದ್ದೇನೆ." ಎಂದಿದ್ದಾರೆ.
ಮುಖ್ಯಮಂತ್ರಿ @BSYBJP ರವರು ಇಂದು ಮೀನುಗಾರರಿಗೆ ಸಂಕಷ್ಟ ಪರಿಹಾರ, ಮತ್ಸ್ಯಾಶ್ರಯ ಯೋಜನೆ ಹಾಗೂ ಭಾಗ್ಯಲಕ್ಷ್ಮಿ ಯೋಜನೆಯಡಿ ಚೆಕ್ ವಿತರಿಸಿದರು.
— CM of Karnataka (@CMofKarnataka) January 19, 2021
ಮೀನುಗಾರಿಕೆ ಮತ್ತು ಮುಜರಾಯಿ ಸಚಿವ @KotasBJP, ಶಾಸಕ ಲಾಲಾಜಿ ಆರ್.ಮೆಂಡನ್ ಹಾಗೂ @RaghupathiBhat, ಸಂಸದೆ @ShobhaBJP ಉಪಸ್ಥಿತರಿದ್ದರು. pic.twitter.com/8WnThCWKEj
"ಮೀನುಗಾರರ ಸಮಸ್ಯೆ ಅರಿತು ಅವರಿಗೆ ಸೂಕ್ತ ಪರಿಹಾರ ಸೂಚಿಸುತ್ತೇನೆ" ಎಂದ ಮುಖ್ಯಮಂತ್ರಿಗಳು "ಗೋಹತ್ಯೆ ನಿಷೇಧ ಖಾನೂನು ಜಾರಿ ಮಾಡಿರುವುದು ಎಲ್ಲರಿಗೆ ಸಮಾಧಾನ ತಂದಿದೆ.ಸ್ವಾತಂತ್ರ ಸಿಕ್ಕ ಕೂಡಲೇ ಗೋಹತ್ಯೆ ನಿಷೇಧ ಆಗಬೇಕೆನ್ನುವುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು.ಆದರೆ ಬೇರೆ ಬೇರೆ ಕಾರಣಗಳಿಂದ ಅದು ಮುಂದೂಡುತ್ತಾ ಬಂದಿತ್ತು.ಆದರೆ ನಾವಿಂದು ಈ ಕಾನೂನನ್ನು ತಕ್ಷಣಕ್ಕೆ ಜಾರಿಗೊಳಿಸಿದ್ದೇವೆ." ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಲಾಲಾಜಿ.ಆರ್.ಮೆಂಡನ್, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
ಉಚ್ಚಿಲ ಮಹಾಲಕ್ಷ್ಮಿ ದೇವಾಲಯ ಭೇಟಿ
ಈ ಮುನ್ನ ಇಂದು ಬೆಳಿಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಪು ತಾಲೂಕಿನ ಉಚ್ಚಿಲ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ @BSYBJP ರವರು ಇಂದು ಕಾಪು ತಾಲೂಕಿನ ಉಚ್ಚಿಲ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
— CM of Karnataka (@CMofKarnataka) January 19, 2021
ಮೀನುಗಾರಿಕೆ ಮತ್ತು ಮುಜರಾಯಿ ಸಚಿವ @KotasBJP, ಶಾಸಕ ಲಾಲಾಜಿ ಆರ್.ಮೆಂಡನ್, ಸಂಸದೆ @ShobhaBJP ಉಪಸ್ಥಿತರಿದ್ದರು. pic.twitter.com/E3rmEKSWdH
ಬಂದರು ಶಿಲಾನ್ಯಾಸಕ್ಕೆ ಮುನ್ನ ಮೊಗವೀರ ಸಮುದಾಯದ ಪ್ರಸಿದ್ಧ ದೇವಸ್ಥಾನ ಉಚ್ಚಿಲ ಮಹಾಲಕ್ಷ್ಮಿ ದೇವಾಲಯಕ್ಕೆ ಮುಖ್ಯಮಂತ್ರಿ ಭೇಟಿ ಕೊಟ್ಟಿದ್ದಾರೆ.
ಮುಖ್ಯಮಂತ್ರಿ @BSYBJP ರವರು ನಿನ್ನೆ ಉಡುಪಿಯ ಕರಂಬಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ವೆಂಕಟರಮಣ ದೇವಸ್ಥಾನದ ನವೀಕರಣ ಕಾರ್ಯ ಸಮರ್ಪಣಾ ಪೂರ್ವಕ ಬ್ರಹ್ಮಕಲಶೋತ್ಸವ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡರು. (1/2) pic.twitter.com/r5xq1RbELn
— CM of Karnataka (@CMofKarnataka) January 19, 2021