ಮೂರು ಪ್ರತ್ಯೇಕ ಪ್ರಕರಣ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.38 ಕೆಜಿ ಚಿನ್ನ ವಶ

ಮೂರು ಪ್ರತ್ಯೇಕ ಘಟನೆಗಳಲ್ಲಿ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ವಾಯು ಗುಪ್ತಚರ ಘಟಕವು 70 ಲಕ್ಷ ರೂ.ಗಳ ಮೌಲ್ಯದ ಒಟ್ಟು 1.38 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. 

Published: 19th January 2021 12:35 PM  |   Last Updated: 19th January 2021 01:01 PM   |  A+A-


ನಿಕ್ಕಲ್ ಲೇಪಿತ ಚಿನ್ನದ ಸರ

Posted By : Raghavendra Adiga
Source : The New Indian Express

ಬೆಂಗಳೂರು: ಮೂರು ಪ್ರತ್ಯೇಕ ಘಟನೆಗಳಲ್ಲಿ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ವಾಯು ಗುಪ್ತಚರ ಘಟಕವು 70 ಲಕ್ಷ ರೂ.ಗಳ ಮೌಲ್ಯದ ಒಟ್ಟು 1.38 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. 

 ಚಿನ್ನವನ್ನು ಅವರು ನಿಕ್ಕಲ್ ಲೇಪಿತ ಸರದಲ್ಲಿ,  ಒಳ ಉಡುಪುಗಳಲ್ಲಿ,  ಸೊಂಟದ ಪಟ್ಟಿಯಲ್ಲಿ  ಮುಚ್ಚಿಟ್ಟು ಸಾಗಣೆ ನಡೆಸಿದ್ದರು.

ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ ಜನವರಿ 17 ರಂದು (ಭಾನುವಾರ) ಕುವೈತ್‌ನಿಂದ ಪುರುಷ ಪ್ರಯಾಣಿಕರೊಬ್ಬರು ಇಂಡಿಗೊ ವಿಮಾನ (6E 8751) ಮೂಲಕ ಕೆಐಎ ತಲುಪಿದ್ದರು. "ಪ್ರಯಾಣಿಕರ ಪ್ರೊಫೈಲಿಂಗ್ ಆಧರಿಸಿ, ನಾವು ಆಂಧ್ರಪ್ರದೇಶದವರಾದ ಪ್ರಯಾಣಿಕರ ನಿಕ್ಕಲ್ ಸರವನ್ನು ಸ್ಕ್ಯಾನ್ ಮಾಡಿದಾಗ  ಚಿನ್ನದ ಸರದ ಮೇಲೆ ನಿಕ್ಕಲ್ ಲೇಪನ ಮಾಡಿರುವುದು ಪತ್ತೆಯಾಗಿದೆ.ಅದನ್ನು ಕರಗಿಸಿದಾಗ, ಇದು 105.02 ಗ್ರಾಂ ತೂಕದ ಶುದ್ಧ ಚಿನ್ನವೆಂದು ನಾವು ಪತ್ತೆ ಮಾಡಿದ್ದೇವೆ. ಇದರ ಮೌಲ್ಯ 5,32,976 ರೂ. ಆಗಿದೆ.

"ಎರಡನೇ ಘಟನೆ ಜನವರಿ 15 ರಂದು ಸಂಭವಿಸಿದೆ ಮತ್ತು ದುಬೈನಿಂದ ಫ್ಲೈ ದುಬೈ ವಿಮಾನ  (FZ 4007) ಬರುವ ಪ್ರಯಾಣಿಕರನ್ನು ಒಳಗೊಂಡಿತ್ತು. "ಮಹಾರಾಷ್ಟ್ರದ ಥಾಣೆ ಮೂಲದ ಪುರುಷ ಪ್ರಯಾಣಿಕನು ಚಿನ್ನವನ್ನು ಪೇಸ್ಟ್‌ನ ರೂಪದಲ್ಲಿ ಇರಿಸಿಕೊಂಡಿದ್ದ, ಅವನು ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇರಿಸಿ. ತನ್ನ ಒಳ ಉಡುಪಿನಲ್ಲಿ ಬ್ರಾಂಡ್ ಹೆಸರಿನ ಹಿಂದೆ ಹೊಲಿದಿಟ್ಟುಕೊಂಡಿದ್ದ." ಅವರು ಹೇಳಿದ್ದಾರೆ.

ಜನವರಿ 14 ರಂದು ಬೆಳಕು ಕಂಡ ಇನ್ನೊಂದು ಪ್ರಕರಣದಲ್ಲಿ "ದುಬೈನಿಂದ ಫ್ಲೈ ದುಬೈ ್ (FZ 4007) ವಿಮಾನದಲ್ಲಿ ಆಗಮಿಸಿದ ಮಹಿಳಾ ಪ್ರಯಾಣಿಕರೊಬ್ಬರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿದಾಗ ಆಕೆ ಸೊಂಟದ ಪಟ್ಟಿಯಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಡಿಕೊಂಡಿದ್ದದ್ದು ಅರಿವಿಗೆ ಬಂದಿದೆ. 1 ಕೆಜಿ ಮತ್ತು 114 ಗ್ರಾಂ. ಚಿನ್ನವನ್ನು ಆಕೆ ಸಾಗಿಸುತ್ತಿದ್ದಳು.  ಇದರ  ಮಾರುಕಟ್ಟೆ ಮೌಲ್ಯ 56,61,445 ರೂ. ಇದೆ ಎಂದು ಕಸ್ಟಮ್ಸ್ ಅಧಿಕಾರಿ ತಿಳಿಸಿದ್ದಾರೆ.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp