ಲಂಚ ಪ್ರಕರಣ: ನಿವೃತ್ತ ಜಡ್ಜ್ ವಿರುದ್ಧ ದೂರು ದಾಖಲು

ವಂಚಕ ಯುವರಾಜ್‍ಗೆ ನಿವೃತ್ತ ನ್ಯಾಯಮೂರ್ತಿ ಒಬ್ಬರು ಗವರ್ನರ್ ಹುದ್ದೆಗಾಗಿ ಹಣ ಸಂದಾಯ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ತನಿಖೆ ನಡೆಸಬೇಕೆಂದು ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

Published: 20th January 2021 09:09 AM  |   Last Updated: 20th January 2021 09:09 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ವಂಚಕ ಯುವರಾಜ್‍ಗೆ ನಿವೃತ್ತ ನ್ಯಾಯಮೂರ್ತಿ ಒಬ್ಬರು ಗವರ್ನರ್ ಹುದ್ದೆಗಾಗಿ ಹಣ ಸಂದಾಯ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ತನಿಖೆ ನಡೆಸಬೇಕೆಂದು ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ರಾಜ್ಯಪಾಲರ ಹುದ್ದೆ ಕೊಡಿಸುವಂತೆ ವಂಚಕ ಯುವರಾಜ್ ಸ್ವಾಮಿಗೆ 8.80 ಕೋಟಿ ರು ಹಣ ನೀಡಿದ್ದಾಗಿ ದೂರು ಕೊಟ್ಟಿದ್ದರು. ಹೀಗಾಗಿ ಗವರ್ನರ್ ಹುದ್ದೆಗಾಗಿ ಲಂಚ ನೀಡಿದ್ದ ನಿವೃತ್ತ ಜಡ್ಜ್ ವಿರುದ್ಧ ಸಿಸಿಬಿಗೆ ವಕೀಲ ಎನ್.ಪಿ. ಅಮೃತೇಶ್ ದೂರು ಸಲ್ಲಿಸಿದ್ದಾರೆ. 

ಯುವರಾಜ್ ಸ್ವಾಮಿ ಈಗಾಗಲೇ ಹಲವರಿಗೆ ಮೋಸ ಮಾಡಿದ್ದು, ಈ ಕೇಸ್‍ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಯ ಹೆಸರೂ ಕೇಳಿಬಂದಿದ್ದು, ಸದ್ಯ ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ.

ಈ ನಿವೃತ್ತ ನ್ಯಾಯಮೂರ್ತಿಗೆ ಗವರ್ನರ್ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ಯುವರಾಜ್ ವಂಚಿಸಿದ್ದಾನೆ. ಇವರು ಉನ್ನತ ಹುದ್ದೆಗಾಗಿ ಹಣ ಸಂದಾಯ ಮಾಡಿದ್ದಾರೆ. ತಾನೂ ಯುವರಾಜ್‍ನಿಂದ ಮೋಸ ಹೋಗಿದ್ದಾಗಿ ನಿವೃತ್ತ ನ್ಯಾಯಮೂರ್ತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. 

ಹಾಗಿದ್ದರೇ ಎಷ್ಟು ಮಂದಿ ರಾಜ್ಯ ಪಾಲರು ಲಂಚ ನೀಡಿ ಹುದ್ದೆ ಅಲಂಕರಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.  ಪೊಲೀಸರು ಕೇವಲ ಆಕೆಯ ಹೇಳಿಕೆ ಆಧರಿಸಿ ಎಫ್ ಐ ಐಆರ್ ದಾಖಲಿಸಿದ್ದಾರೆ ಎಂದು ಅಮೃತೇಶ್ ಆರೋಪಿಸಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಹಣ ನೀಡಿರುವ ನಿವೃತ್ತ ನ್ಯಾಯಮೂರ್ತಿ ವಿರುದ್ಧವೂ ತನಿಖೆಯಾಗಬೇಕು ಎಂದು ವಕೀಲ ಅಮೃತೇಶ್ ದೂರಿನಲ್ಲಿ ತಿಳಿಸಿದ್ದಾರೆ.
 


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp