ಭಿಕ್ಷಾಟನೆ ದಂಧೆ ಬಗ್ಗೆ ಹೆಚ್ಚು ನಿಗಾ ವಹಿಸಿ: ಸರ್ಕಾರಕ್ಕೆ ಕೋರ್ಟ್ ಜಡ್ಜ್ ಸೂಚನೆ

ಶಾಲೆಗಳಿಂದ ಹೊರಗುಳಿದ ಮತ್ತು ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು ಮತ್ತು ಭಿಕ್ಷೆ ಬೇಡುತ್ತಿರುವ ಮಕ್ಕಳು ಸರಿಯಾದ ಶಿಕ್ಷಣವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು.

Published: 20th January 2021 01:10 PM  |   Last Updated: 20th January 2021 01:14 PM   |  A+A-


High court

ಹೈಕೋರ್ಟ್

Posted By : Shilpa D
Source : The New Indian Express

ಬೆಂಗಳೂರು: ಶಾಲೆಗಳಿಂದ ಹೊರಗುಳಿದ ಮತ್ತು ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು ಮತ್ತು ಭಿಕ್ಷೆ ಬೇಡುತ್ತಿರುವ ಮಕ್ಕಳು ಸರಿಯಾದ ಶಿಕ್ಷಣವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು  ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದ್ದಾರೆ. 

ಮಕ್ಕಳು ಭಿಕ್ಷಾಟನೆ ಹಾಗೂ ಬೀದಿ ವ್ಯಾಪಾರದಲ್ಲಿ ತೊಡಗುವುದನ್ನು ತಡೆಯುವ ಕುರಿತು ನಗರ ಕಾರ್ಯಪಡೆ ಸಮಿತಿಯ ಸದಸ್ಯರಿಗಾಗಿ ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ  ಮಾತನಾಡಿದ ಅವರು,  ವಿದ್ಯಾಭ್ಯಾಸದಲ್ಲಿ ತೊಡಗಬೇಕಾದ ಮಕ್ಕಳು ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವುದು, ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದಾದರೂ ಏಕೆ. ಈ ಬಗ್ಗೆ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ನಿಸ್ವಾರ್ಥದಿಂದ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

‘ಮಕ್ಕಳು ಭಿಕ್ಷೆ ಬೇಡುವುದನ್ನು ಹಾಗೂ ಆಟಿಕೆ ಮಾರುವುದನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬಿಬಿಎಂಪಿ ಹಾಗೂ ಇನ್ನಿತರ ಇಲಾಖೆಗಳು ಸೇರಿ ಮಾಹಿತಿ ಸಂಗ್ರಹಿಸಲಿವೆ. ವಲಯವಾರು ತಂಡಗಳನ್ನು ರಚಿಸಿ ಈ ಸಮೀಕ್ಷೆ ಪ್ರಾರಂಭಿಸಲಾಗುವುದು’ ಎಂದರು.

ಸಿಗ್ನಲ್‌ಗಳಲ್ಲಿ, ಬೀದಿಗಳಲ್ಲಿ, ದೇವಸ್ಥಾನ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್‌ಗಳ ಬಳಿ  ಮಕ್ಕಳು ಭಿಕ್ಷೆ ಬೇಡುವುದು, ಆಟಿಕೆಗಳನ್ನು ಮಾರುವುದು ಬಹಳ ಸೂಕ್ಷ್ಮ ವಿಚಾರ. ಇದಕ್ಕೆ ಕಾರಣಗಳೇನು, ಅವರ ಹಿನ್ನೆಲೆ ಏನು, ಎಲ್ಲಿಂದ ಬಂದಿದ್ದಾರೆ, ಎಲ್ಲಿ ನೆಲೆಸಿದ್ದಾರೆ, ಮಕ್ಕಳ ತಂದೆ-ತಾಯಿ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಬೇಕು. ಸಮೀಕ್ಷೆ ವೇಳೆ ಮಕ್ಕಳ ಜೊತೆ ಏಕಾಏಕಿ ಪ್ರಶ್ನೆ ಕೇಳದೆ ಸಂಯಮದಿಂದ ಅವರ ಜೊತೆ ಬೆರೆತು ಮಾಹಿತಿ ಸಂಗ್ರಹಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ‘ಮನೆ ಬಾಗಿಲಿಗೆ ಶಾಲೆ’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಬಸ್‌ಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಬಳಸಲಾಗುತ್ತದೆ. ಈ ಸಂಬಂಧ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತುಕತೆ ನಡೆಸಲಾಗಿದೆ. ಈ  ಕಾರ್ಯಕ್ರಮಕ್ಕಾಗಿ ಬಿಎಂಟಿಸಿಯಿಂದ ಪಾಲಿಕೆಯು 10 ಬಸ್‌ಗಳನ್ನು ಪಡೆದಿದೆ. ಅವುಗಳಿಗೆ ಹೊಸ ರೂಪ ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದರು. 

‘ಪಾಲಿಕೆ ವತಿಯಿಂದಲೇ ಶಿಕ್ಷಕರು ಹಾಗೂ ಚಾಲಕರನ್ನು ನೇಮಕ ಮಾಡಲಾಗುತ್ತದೆ. ಹೆಚ್ಚು ಮಕ್ಕಳಿರುವ ಕೊಳೆಗೇರಿಗಳನ್ನು ಗುರುತಿಸಿ ಅಲ್ಲಿಗೆ ಬಸ್‌ಗಳನ್ನು ಕಳುಹಿಸಲಾಗುತ್ತದೆ. ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ವಿವರಿಸಿದರು.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನ ಆಯುಕ್ತರು ಹಾಗೂ  ಸೌದಿ ಅರೇಬಿಯಾ ದೂತಾವಾಸದಿಂದ  ಕರೆ ಬಂದಿದ್ದು, ಭಿಕ್ಷಾಟನೆಯಲ್ಲಿ ತೊಡಗಿದ್ದ ಸುಮಾರು 70-80 ಮಕ್ಕಳನ್ನು ಅವರು ವಶಕ್ಕೆ ಪಡೆದಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. 

ಮಕ್ಕಳನ್ನು ಮದುವೆಯಾಗಿ ಅರಬ್ಬರಿಗೆ ಕಳ್ಳಸಾಗಣೆ ಮಾಡಲಾಯಿತು ಮತ್ತು ಭಿಕ್ಷಾಟನೆ ಮತ್ತು ಇತರ ಅಕ್ರಮ ವ್ಯವಹಾರಗಳಿಗೆ ತಳ್ಳಲಾಯಿತು ಎಂದು ತನಿಖೆಯಿಂದಾಗಿ  ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.  ಭಾರತದಿಂದ ಕಳ್ಳಸಾಗಣೆ ಮಾಡಲ್ಪಟ್ಟ ಮಕ್ಕಳು ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದವರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಇಂತ ದಂಧೆ ಬೆಂಗಳೂರಿನಲ್ಲಿಯೂ ನಡೆಯುತ್ತಿದ್ದು, ಕೆಲವು ಮಾಫಿಯಾಗಳು  ಅದರಲ್ಲಿ ಭಾಗಿಯಾಗಿವೆ , ಇಂಥದ್ದನ್ನು ತಡೆಯಬೇಕು ಎಂದು ಪ್ರಸಾದ್ ಕರೆ ನೀಡಿದ್ದಾರೆ. 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp