ಇನ್ನೆರಡು ದಿನಗಳಲ್ಲಿ ಶಾಲಾ ಕಾಲೇಜುಗಳ ಶುಲ್ಕ ಘೋಷಣೆ: ಸುರೇಶ್ ಕುಮಾರ್
ಅನುದಾನಿತ ಶಾಲೆಗಳ ಶುಲ್ಕವನ್ನು ಇನ್ನೆರಡು ದಿನಗಳಲ್ಲಿ ನಿಗದಿಪಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
Published: 20th January 2021 06:29 PM | Last Updated: 20th January 2021 06:29 PM | A+A A-

ಸುರೇಶ್ ಕುಮಾರ್
ಬೆಂಗಳೂರು: ಅನುದಾನಿತ ಶಾಲೆಗಳ ಶುಲ್ಕವನ್ನು ಇನ್ನೆರಡು ದಿನಗಳಲ್ಲಿ ನಿಗದಿಪಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶುಲ್ಕ ನಿಗದಿ ಪಡಿಸುವ ಕುರಿತು ಎಲ್ಲಾ ಅಂಶಗಳನ್ನು ಪರಿಗಣಿಸಬೇಕಿದೆ. ಒಂದೆಡೆ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಪೋಷಕರ ಆರ್ಥಿಕ ಸ್ಥಿತಿಗತಿ ಹಾಗೂ ಹದಗೆಟ್ಟಿರುವ ಶಾಲೆಗಳ ಸ್ಥಿತಿಗತಿಗಳನ್ನು ಕೂಡ ಪರಿಗಣಿಸಬೇಕಿದೆ ಎಂದರು.
ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಇನ್ನೂ ಪರಿಶೀಲಿಸಿಲ್ಲ. ಯಾರಿಗೂ ಅನ್ಯಾಯವಾಗದಂತೆ ಶುಲ್ಕ ನಿಗದಿಪಡಿಸಲಾಗುವುದು ಎಂದರು.
ಪಿಯುಸಿ ಮತ್ತು 8,9 ನೇ ತರಗತಿಗಳನ್ನ ಆರಂಭಿಸುವಂತೆ ಬೇಡಿಕೆಗಳು ಕೇಳಿಬರುತ್ತಿವೆ. ಇದನ್ನೂ ಸಹ ತಾಂತ್ರಿಕ ಸಮಿತಿ ವರದಿ ನೀಡಿದ ಮೇಲೆ ನಿರ್ಧರಿಸಲಾಗುವುದು ಎಂದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಶಾಲೆಗಳು ಆರಂಭವಾಗುವ ಮೊದಲು 45 ದಿನಗಳ ವರೆಗೆ ಬ್ರಿಡ್ಜ್ ಕೋರ್ಸ್ ಮಾಡಲಾಗುವುದು. ಈ ಬ್ರಿಡ್ಜ್ ಕೋರ್ಸ್ ಹಿಂದಿನ ತರಗತಿಗಳನ್ನ ಕಲಿಸಿ ನಂತರ ಉಳಿದ ಪ್ರಸ್ತುತ ವರ್ಷದ ವಿಷಯಗಳನ್ನ ಕಲಿಸಲಾಗುವುದು ಎಂದರು.