ಸುಳ್ಯ: ಅಕ್ರಮ ಮರದ ದಿಮ್ಮಿ ಸಾಗಣೆ, ಗ್ರಾಮ ಪಂಚಾಯತ್ ಸದಸ್ಯ ಸೇರಿ ಮೂವರು ಸೆರೆ

ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಪಂಜ ವಲಯದ ಅರಣ್ಯಾಧಿಕಾರಿಗಳು ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

Published: 20th January 2021 06:15 PM  |   Last Updated: 20th January 2021 07:05 PM   |  A+A-


ಬಂದಿತ ಆರೋಪಿಗಳು

Posted By : Raghavendra Adiga
Source : Online Desk

ಸುಳ್ಯ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಪಂಜ ವಲಯದ ಅರಣ್ಯಾಧಿಕಾರಿಗಳು ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಜಾಲ್ಸೂರು  ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಮೊಹಮ್ಮದ್ ಸೋಯಾಬ್ ದೇಲಂಪಾಡಿ ಮತ್ತು ಅಭಿಲಾಶ್ ಗೌಡ ಅರಕಲಗೂಡು ಬಂಧಿತರು. 

ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಆರೋಪಿಗಳು ಮರಗಳನ್ನು ಕಡಿದು  ಸಂಗ್ರಹಿಸಿದ್ದರು  ಪಂಜ ವಲಯ ಅರಣ್ಯ ಅಧಿಕಾರಿಗಳು ಮರದ ದಿಮ್ಮಿಗಳನ್ನು ಮತ್ತು ಟ್ರಕ್, ಜೆಸಿಬಿ ಮತ್ತು ಬೊಲೆರೊ ಜೀಪ್ ಅನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ದಿಮ್ಮಿಗಳು ಹಾಗೂ ವಾಹನಗಳ ಒಟ್ಟು ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ,

ಕರ್ನಾಟಕ-ಕೇರಳ ಗಡಿಯಿಂದ 27 ಮರದ ದಿಮ್ಮಿಗಳು ಮತ್ತು ಒಂದು ಲಾರಿಯನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟೂ ಮೌಲ್ಯ 5 ಲಕ್ಷ ಎಂದು ಅಂದಾಜಿಸಲಾಗಿದೆ.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp