ಶಾಲೆ, ಕಾಲೇಜುಗಳು ಪುನರಾರಂಭ: 'ನಮ್ಮ ಮೆಟ್ರೊ' ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
ಕಳೆದ ಜನವರಿ 1ರಿಂದ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಬಹುತೇಕ ಶಾಲೆಗಳಲ್ಲಿ ತರಗತಿಗಳು ಆರಂಭವಾಗಿದೆ. ಶಾಲೆಗಳು ಆರಂಭವಾಗುತ್ತಿದ್ದಂತೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಕೊರೋನಾ ನಂತರ ಇಳಿಮುಖವಾಗಿದ್ದ ಪ್ರಯಾಣಿಕರ ಸಂಖ್ಯೆ ಹೊಸ ವರ್ಷದ ನಂತರ ಹೆಚ್ಚಾಗಿದ್ದು ಈಗ ಪ್ರತಿದಿನ 1.25 ಲಕ್ಷದಷ್ಟು ಪ್ರಯಾಣಿಕರು ಓಡಾಡುತ್ತಿದ್ದಾರೆ.
Published: 20th January 2021 09:52 AM | Last Updated: 20th January 2021 12:58 PM | A+A A-

ಮೆಟ್ರೊ ರೈಲು
ಬೆಂಗಳೂರು: ಕಳೆದ ಜನವರಿ 1ರಿಂದ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಬಹುತೇಕ ಶಾಲೆಗಳಲ್ಲಿ ತರಗತಿಗಳು ಆರಂಭವಾಗಿದೆ. ಶಾಲೆಗಳು ಆರಂಭವಾಗುತ್ತಿದ್ದಂತೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಕೊರೋನಾ ನಂತರ ಇಳಿಮುಖವಾಗಿದ್ದ ಪ್ರಯಾಣಿಕರ ಸಂಖ್ಯೆ ಹೊಸ ವರ್ಷದ ನಂತರ ಹೆಚ್ಚಾಗಿದ್ದು ಈಗ ಪ್ರತಿದಿನ 1.25 ಲಕ್ಷದಷ್ಟು ಪ್ರಯಾಣಿಕರು ಓಡಾಡುತ್ತಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಬೆಂಗಳೂರು ಮೆಟ್ರೊ ರೈಲು ನಿಗಮದ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್, ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು ಪುನರಾರಂಭಿಸಿದ್ದಾರೆ. ಯೆಲಚೇನಹಳ್ಳಿಯಿಂದ ನಾಗಸಂದ್ರದವರೆಗೆ ಮೆಟ್ರೊ ಮೊದಲ ಹಂತದ ಹಸಿರು ವಲಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ನೇರಳೆ ವಲಯಕ್ಕಿಂತ ಹಸಿರು ವಲಯದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುತ್ತದೆ, ಇತ್ತೀಚೆಗೆ ಅದು ಹೆಚ್ಚಾಗಿದೆ, ವಾರದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಪೇಟಿಂ ಮೂಲಕ ಮೆಟ್ರೊ ಕಾರ್ಡು ರಿಚಾರ್ಜ್: ಪೇಟಿಂ ಬಳಸಿ ಪ್ರಯಾಣಿಕರು ಸ್ಮಾರ್ಟ್ ನ್ನು ರಿಚಾರ್ಜ್ ಮಾಡಿಕೊಳ್ಳಬಹುದು. 5 ದಿನಗಳ ಹಿಂದೆ ಈ ಸೌಲಭ್ಯವನ್ನು ತರಲಾಗಿದ್ದು ಪ್ರಯಾಣಿಕರು ಬಳಸಲು ಆರಂಭಿಸಿದ್ದಾರೆ. ನಮ್ಮ ಮೆಟ್ರೊ ಆಪ್ ನ್ನು ಇನ್ನು ಮುಂದೆ ಪ್ರಯಾಣಿಕರು ಹೊಂದಿರಲೇ ಬೇಕೆಂದಿಲ್ಲ. ಪೇಟಿಂ ಮೂಲಕ ಮೆಟ್ರೊ ಕಾರ್ಡನ್ನು ರಿಚಾರ್ಜ್ ಮಾಡಿಕೊಳ್ಳಬಹುದು ಎಂದರು.