
ಸಾಂದರ್ಭಿಕ ಚಿತ್ರ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಎದುರು ಮಾಡಿರುವ ಕನ್ನಡ ಧ್ವಜಸ್ತಂಭ ತೆರವುಗೊಳಿಸುವಂತೆ ಒತ್ತಾಯಿಸಿ ಎಂಇಎಸ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಎಂಇಎಸ್ ನಡೆಸುವ ಈ ಪ್ರತಿಭಟನೆಗೆ ಶಿವ ಸೇನೆ ಮತ್ತು ಕೊಲ್ಹಾಪುರದ ಹಲವು ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿವೆಯ
ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುತ್ತಿರುವ ಪ್ರತಿಭಟನೆಗೆ ಮಹಾರಾಷ್ಟ್ರದ ಶಿವಸೇನೆ ಬೆಂಬಲ ವ್ಯಕ್ತಪಡಿಸುವ ಮೂಲಕ ಮತ್ತೆ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವನೆ ನಾಲಿಗೆ ಹರಿಬಿಟ್ಟಿದ್ದಾರೆ.
ಜನವರಿ 21ರಂದು ಮಹಾನಗರ ಪಾಲಿಕೆ ಎದುರುಗಿನ ಕನ್ನಡ ಬಾವುಟವನ್ನು ಕರ್ನಾಟಕ ರಕ್ಷಣಾ ವೇದಿಕೆಯವರು ತೆರವುಗೊಳಿಸಬೇಕು. ಇಲ್ಲವಾದ್ರೆ ಎಂಇಎಸ್ ಪ್ರತಿಭಟನೆಯಲ್ಲಿ ನಾವು ಭಾಗಿಯಾಗುತ್ತೇವೆ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.
ಇನ್ನು ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಕರ್ನಾಟಕದಲ್ಲಿರಲು ಬಿಡುವುದಿಲ್ಲ ಅದನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡೋದಾಗಿ ಈಗಾಲೇ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಈಗ ಎಂಇಎಸ್ ಮತ್ತು ಶಿವಸೇನೆ ತನ್ನ ಪುಂಡಾಟ ಪ್ರದರ್ಶಿಸುತ್ತಿದೆ.
ಡಿ.28ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಧ್ವಜಸ್ತಂಭ ಸಮೇತ ಬಂದ ಕನ್ನಡಪರ ಹೋರಾಟಗಾರರು ಕನ್ನಡ ಧ್ವಜ ಹಾರಿಸುವುದರ ಮೂಲಕ ಕನ್ನಡ ಪ್ರೇಮ ಮೆರೆದಿದ್ದರು. ಇಡೀ ಕರ್ನಾಟಕವೇ ಅಂದು ಸಂಭ್ರಮಿಸಿತ್ತು. ಆದ್ರೆ, ನಮ್ಮ ನೆಲದಲ್ಲಿದ್ದ ನಾಡದ್ರೋಹಿಗಳು ಮಾತ್ರ ಅಂದು ನಿದ್ದೆ ಮಾಡಿರಲಿಲ್ಲ.
ಮಾರನೇ ದಿನವೇ ಕನ್ನಡ ಧ್ವಜಸ್ತಂಭ ತೆರವು ಮಾಡಿ, ಇಲ್ಲವಾದ್ರೆ ನಾವೇ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಡೆಡ್ಲೈನ್ ಕೊಟ್ಟಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಜ.17ರಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಟ್ವೀಟ್ ಮಾಡಿದ್ದು, ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.