ರಾಜ್ಯದಲ್ಲಿ ಇಂದು 674 ಹೊಸ ಕೋವಿಡ್ ಪ್ರಕರಣಗಳು ಪತ್ತೆ, ಇಬ್ಬರ ಸಾವು!
ರಾಜ್ಯದಲ್ಲಿಂದು 674 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಂದು 815 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸೋಂಕಿತರ ಸಂಖ್ಯೆ 914492ಕ್ಕೆ ಏರಿಕೆಯಾಗಿದೆ.
Published: 21st January 2021 09:19 PM | Last Updated: 21st January 2021 09:19 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿಂದು 674 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಂದು 815 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸೋಂಕಿತರ ಸಂಖ್ಯೆ 914492ಕ್ಕೆ ಏರಿಕೆಯಾಗಿದೆ.
ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 7554 ಆಗಿದೆ. ಕೋವಿಡ್-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 934252ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 0.75, ಮೃತರ ಶೇಕಡಾವಾರು ಪ್ರಮಾಣ ಶೇ.0. 29 ಆಗಿದೆ.
ಬಾಗಲಕೋಟೆಯಲ್ಲಿ 0, ಬಳ್ಳಾರಿ 7, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 371, ಬೀದರ್ 2, ಚಾಮರಾಜನಗರ 1, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 5, ಚಿತ್ರದುರ್ಗ 6, ದಕ್ಷಿಣ ಕನ್ನಡ 39, ದಾವಣಗೆರೆ 7, ಧಾರವಾಡ 9, ಗದಗ 1, ಹಾಸನ 16, ಹಾವೇರಿ 3, ಕಲಬುರಗಿ 40, ಕೊಡಗು, 5, ಕೋಲಾರ 10, ಕೊಪ್ಪಳ 1, ಮಂಡ್ಯ 6, ಮೈಸೂರು 35, ರಾಯಚೂರು 1, ರಾಮನಗರ 2, ಶಿವಮೊಗ್ಗ 17, ತುಮಕೂರು 26, ಉಡುಪಿ 7, ಉತ್ತರ ಕನ್ನಡ 8, ವಿಜಯಪುರ 2, ಯಾದಗಿರಿಯಲ್ಲಿ 3 ಪ್ರಕರಣಗಳು ಇಂದು ದೃಢಪಟ್ಟಿವೆ.