ಮಂಗಳೂರು ವಿಮಾನ ನಿಲ್ದಾಣ: ಗುದದ್ವಾರದಲ್ಲಿ ಮುಚ್ಚಿಟ್ಟು ಚಿನ್ನ ಸಾಗಣೆ, ದುಬೈನಿಂದ ಬಂದ ಪ್ರಯಾಣಿಕ ಅರೆಸ್ಟ್

ಗುಪ್ತಚರ ವರದಿಯ ಹಿನ್ನೆಲೆ ದುಬೈನ ಓರ್ವ ಪ್ರಯಾಣಿಕನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು  ಆತನಿಂದ 44.2 ಲಕ್ಷ ರೂ.ಗಳ ಚಿನ್ನವನ್ನು ಜಪ್ತಿ ಮಾಡಲಾಗಿದೆ.

Published: 21st January 2021 04:16 PM  |   Last Updated: 21st January 2021 04:39 PM   |  A+A-


ವಶಕ್ಕೆ ಪಡೆಯಲಾದ ಚಿನ್ನ

Posted By : Raghavendra Adiga
Source : Online Desk

ಮಂಗಳೂರು: ಗುಪ್ತಚರ ವರದಿಯ ಹಿನ್ನೆಲೆ ದುಬೈನ ಓರ್ವ ಪ್ರಯಾಣಿಕನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು  ಆತನಿಂದ 44.2 ಲಕ್ಷ ರೂ.ಗಳ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಬಂಧಿತನನ್ನು ಮಡಿಕೇರಿ ಮೂಲದ ಉಬೈದ್ ಬಲಿಯತ್ ಅಝೀಝ್ ಎಂದು ಗುರಿತಿಸಲಾಗಿದೆ. ಆತ ದುಬೈನಿಂದ ಏರ್ ಇಂಡಿಯಾ ವಿಮಾನ IX 1814 ಮೂಲಕ ಮಂಗಳೂರಿಗೆ ಆಗಮಿಸಿದ್ದ.

ಆತನನ್ನು ಶೋಧಿಸಿದಾಗ ತನ್ನ ಗುದದ್ವಾರದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಚಿರುವುದು ಕಂಡುಬಂದಿದೆ. ಈತ  0.8 ಕೆಜಿ ಚಿನ್ನವನ್ನು ಸಾಗಾಟ ನಡೆಸಿದ್ದ ಎಂದು ತಿಳಿದುಬಂದಿದೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp