ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ಪಡೆಯದೆ ನಿರ್ಮಿಸಿದ 65 ಬಡಾವಣೆ ಸಕ್ರಮಗೊಳಿಸಲು ಸಂಪುಟ ಅನುಮೋದನೆ

ಕರ್ನಾಟಕ ಗೃಹ ನಿರ್ಮಾಣದಿಂದ ವಿನ್ಯಾಸ ಮತ್ತು ನಕ್ಷೆಗೆ ಅನುಮೋದನೆ ಪಡೆಯದೆ ನಿರ್ಮಾಣ ಮಾಡಲಾಗಿರುವ 60 ಕಾಮಗಾರಿಗಳಿಗೆ ಮತ್ತು ಪೂರ್ಣಗೊಳಿಸಲು ಬಾಕಿ ಇರುವ 6 ಸೇರಿ ಒಟ್ಟು 65 ವಸತಿ ಬಡಾವಣೆಗಳಿಗೆ...

Published: 21st January 2021 07:53 PM  |   Last Updated: 21st January 2021 07:56 PM   |  A+A-


Home minister Basavaraj bommai

ಗೃಹ ಸಚಿವ ಬಸವರಾಜ ಬೊಮ್ಮಾಯಿ

Posted By : Lingaraj Badiger
Source : UNI

ಬೆಂಗಳೂರು: ಕರ್ನಾಟಕ ಗೃಹ ನಿರ್ಮಾಣದಿಂದ ವಿನ್ಯಾಸ ಮತ್ತು ನಕ್ಷೆಗೆ ಅನುಮೋದನೆ ಪಡೆಯದೆ ನಿರ್ಮಾಣ ಮಾಡಲಾಗಿರುವ 60 ಕಾಮಗಾರಿಗಳಿಗೆ ಮತ್ತು ಪೂರ್ಣಗೊಳಿಸಲು ಬಾಕಿ ಇರುವ 6 ಸೇರಿ ಒಟ್ಟು 65 ವಸತಿ ಬಡಾವಣೆಗಳಿಗೆ ಯಥಾಸ್ಥಿತಿ ವಿನ್ಯಾಸಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಇಂದು ಸಂಜೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಗೃಹ ಮಂಡಳಿ ಅನುಮೋದನೆ ಪಡೆಯದೆ ನಿರ್ಮಾಣ ಮಾಡಿರುವ ಮತ್ತು ಬಾಕಿ ಇರುವ 134 ಯೋಜನೆಗಳಿಗೆ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ ಅವರು, 2021ನೇ ಸಾಲಿನಲ್ಲಿ 1500 ವಿಕಲ ಚೇತನರಿಗೆ ತ್ರಿಚಕ್ರ ವಾಹನಗಳನ್ನು ಖರೀದಿಸಲು 12.75 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ ಅಡಿಯಲ್ಲಿ ವೀಡಿಯೋ ಕಾನ್ಫರೆನ್ ಸೇವೆಗಳನ್ನು ಜಾರಿಗೊಳಿಸಲು 35 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ 19 ಕೆರೆಗಳಿಗೆ ತುಂಗ ಭದ್ರಾ ನದಿಯಿಂದ ನೀರನ್ನು ತುಂಬಿಸುವ ಬೆನಕನಹಳ್ಳಿ ಏತ ನೀರಾವರಿ ಯೋಜನೆಗೆ 48 ಕೋಟಿ ರೂ ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡುವುದು ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp