
ಅಂಜಲಿ ನಿಂಬಾಳ್ಕರ್
ಬೆಂಗಳೂರು: ಕೇಂದ್ರದ ಕೃಶಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಡೆದ ರಾಜಭಾವನ ಚಲೋ ವೇಳೆ ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅಸ್ವಸ್ಥರಾದ ಘಟನೆ ನಡೆಯಿತು.
ರಾಜಭವನ ಮುತ್ತಿಗೆಗೆ ಹಾಕಲು ಹೊರಟ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಮಹಾರಾಣಿ ಕಾಲೇಜು ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ತಡೆದ ಪೋಲಿಸರು ತಡೆದರು.
ಈ ವೇಳೆ, ಪೊಲೀಸರು ಮತ್ತು ಶಾಸಕಿಯರಾದ ಸೌಮ್ಯಾ ರೆಡ್ಡಿ, ಅಂಜಲಿ ನಿಂಬಾಳ್ಕರ್ ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ವಶಕ್ಕೆ ಪಡೆಯಲು ಮುಂದಾದ ವೇಳೆ ಅಂಜಲಿ ನಿಂಬಾಳ್ಕರ್ ಕುಸಿದು ಬಿದ್ದರು. ಬಳಿಕ ಅಂಜಲಿ ನಿಂಬಾಳ್ಕರ್ ಅವರು ಕೆಲ ಹೊತ್ತು ರಸ್ತೆಯಲ್ಲೇ ಕುಳಿತು ವಿಶ್ರಾಂತಿ ಪಡೆದರು. ಬಳಿಕ ಪೊಲೀಸರು ಕುಡಿಯಲು ನೀರು ಕೊಟ್ಟು ಉಪಚರಿಸಿದರು. ನಂತರ ನಿಂಬಾಳ್ಕರ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.