ಶಿವಮೊಗ್ಗ: 2 ದಿನಗಳ ಹಿಂದೆ ಕೊರೋನಾ ಲಸಿಕೆ ಪಡೆದಿದ್ದ ವೈದ್ಯ ಸಾವು!

2 ದಿನಗಳ ಹಿಂದಷ್ಟೇ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ...

Published: 21st January 2021 09:53 AM  |   Last Updated: 22nd January 2021 05:05 PM   |  A+A-


covid vaccine news

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಶಿವಮೊಗ್ಗ: 2 ದಿನಗಳ ಹಿಂದಷ್ಟೇ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಡಾ.ಟಿ.ಎ.ಜಯಪ್ರಕಾಶ್ ಸಾವನ್ನಪ್ಪಿದ ವೈದ್ಯರಾಗಿದ್ದಾರೆ. ಜಯಪ್ರಕಾಶ್(59) ನಗರದ ಪ್ರಸಿದ್ಧ ವೈದ್ಯರಾಗಿದ್ದು, ತಮ್ಮದೇ ಆಸ್ಪತ್ರೆ ಹೊಂದಿದ್ದರು, ನಗರದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಮೂಳೆ ಚಿಕಿತ್ಸೆ ಬಗ್ಗೆ ಉಪನ್ಯಾಸ ಮಾಡುತ್ತಿದ್ದರು. 

ಎರಡು ದಿನಗಳ ಹಿಂದಷ್ಟೇ ಜಯಪ್ರಕಾಶ್ ಅವರು ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದರು. ಲಸಿಕೆ ಹಾಕಿಸಿಕೊಂಡ ಫೋಟೋ ಎಲ್ಲೆಡೆ ಶೇರ್ ಮಾಡಿಕೊಂಡು ಲಸಿಕೆ ಬಗ್ಗೆ ಅನುಮಾನ ಬೇಡವೆಂದು ಹೇಳಿದ್ದರು.

ಬುಧವಾರ ಬೆಳಿಗ್ಗೆ ವೈದ್ಯರಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ವೈದ್ಯರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಡುವೆ ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿಯವರು, ಜಯಪ್ರಕಾಶ್ ಅವರು ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿದ್ದಾರೆಯೇ ಹೊರತು ಲಸಿಕೆಯ ಅಡ್ಡ ಪರಿಣಾಮಗಳಿಂದಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ಡುವೆ ಬುಧವಾರ ಶೇ.55 ಲಷ್ಟು ಜನರು ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆದುಕೊಂಡಿದ್ದು, ಚಿತ್ರದುರ್ಗ, ಧಾರವಾಡ, ಕೊಪ್ಪಳದಲ್ಲಿ ಶೇ.28 ರಷ್ಟು ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. 

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp