ವಿಮಾನ ನಿಲ್ಗಾಣಕ್ಕೆ ರೈಲು ಸೇವೆ: ಪ್ರಯಾಣಿಕರ ನಿರಾಸಕ್ತಿ, 11 ಖಾಲಿ ಟ್ರಿಪ್!

ಭಾರಿ ಸದ್ದು ಮಾಡಿದ್ದ ವಿಮಾನ ನಿಲ್ಗಾಣಕ್ಕೆ ರೈಲು ಸೇವೆ ಯೋಜನೆ ಚಾಲನೆ ಪಡೆದ ಕೇವಲ 15 ದಿನಗಳಲ್ಲೇ ಫ್ಲಾಪ್ ಆಯ್ತಾ...? ಎಂಬ ಪ್ರಶ್ನೆ ಉದ್ಭವವಾಗಿದೆ.

Published: 21st January 2021 02:00 PM  |   Last Updated: 21st January 2021 02:07 PM   |  A+A-


KIA-halt-station

ಏರ್ ಪೋರ್ಟ್ ರೈಲು ನಿಲ್ದಾಣ

Posted By : Srinivasamurthy VN
Source : The New Indian Express

ಬೆಂಗಳೂರು: ಭಾರಿ ಸದ್ದು ಮಾಡಿದ್ದ ವಿಮಾನ ನಿಲ್ಗಾಣಕ್ಕೆ ರೈಲು ಸೇವೆ ಯೋಜನೆ ಚಾಲನೆ ಪಡೆದ ಕೇವಲ 15 ದಿನಗಳಲ್ಲೇ ಫ್ಲಾಪ್ ಆಯ್ತಾ...? ಎಂಬ ಪ್ರಶ್ನೆ ಉದ್ಭವವಾಗಿದೆ.

ಹೌದು... ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಗಾಣಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಕೇವಲ 10 ರೂ ಮತ್ತು 15 ರೂಗಳಲ್ಲೇ  ವಿಮಾನ ನಿಲ್ದಾಣಕ್ಕೆ ರೈಲು ಮೂಲಕ ಪ್ರಯಾಣಿಸಬಹುದು ಎಂಬ ಕಾರಣಕ್ಕೇ ಈ ಯೋಜನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಆದರೆ ಈ ಯೋಜನೆ ಚಾಲನೆ ಪಡೆದ ಕೇವಲ 15 ದಿನದಲ್ಲೇ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಯೋಜನೆಗೆ ಜನರಿಂದ ಸರಿಯಾದ ಸಹಕಾರ ದೊರೆಯದ ಹಿನ್ನಲೆಯಲ್ಲಿ ರೈಲುಗಳು ಖಾಲಿ ಟ್ರಿಪ್ ನಡೆಸುತ್ತಿವೆ.

ವಿಮಾನ ನಿಲ್ಗಾಣಕ್ಕೆ ಪ್ರಯಾಣಿಸುತ್ತಿರುವ ರೈಲುಗಳಲ್ಲಿ ಕೇವಲ ಬೆರಳಿಕೆ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಇದೇ ಜನವರಿ 4ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ ಗೆ 3 ಜೊತೆ ರೈಲುಗಳನ್ನು ನಿಯೋಜಿಸಲಾಗಿತ್ತು. ಈ ರೈಲುಗಳು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಲಹಂಕ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದ ಹಾಲ್ಟ್  ನಿಲ್ದಾಣಗಳಿಂದ ಕಾರ್ಯ ನಿರ್ವಹಿಸುತ್ತಿದ್ದವು.

ಪ್ರತೀ ರೈಲು ಕೂಡ ಸುಮಾರು 610 ಪ್ರಯಾಣಿಕರು ಪ್ರಯಾಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ರೈಲುಗಳಲ್ಲಿ ಈ ವರೆಗೂ ಗರಿಷ್ಠ 149 ಮಂದಿ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಿದ್ದಾರೆ. ಕೆಲವೊಮ್ಮೆ ರೈಲುಗಳು ಪ್ರಯಾಣಿಕರೇ ಇಲ್ಲದೇ ಪ್ರಯಾಣ ಮಾಡಿರುವ ನಿದರ್ಶನ ಕೂಡ ಇದೆ. ಈ ವರೆಗೂ 11 ಬಾರಿ ರೈಲುಗಳು ಪ್ರಯಾಣಿಕರೇ ಇಲ್ಲದೇ ಟ್ರಿಪ್ ಹೊಡೆದಿದೆ. ಈ ಪೈಕಿ 7 ಬಾರಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದರೆ, 4 ಬಾರಿ  ಪ್ರಯಾಣಿಕರೇ ಇಲ್ಲದೇ ವಿಮಾನ ನಿಲ್ದಾಣದಿಂದ ಮರಳಿದೆ. ಆರು ಬಾರಿ ಕೇವಲ ಓರ್ವ ಪ್ರಯಾಣಿಕನನ್ನು ಹೊತ್ತು ಟ್ರಿಪ್ ಮಾಡಿದೆ ಎಂದು ನೈಋತ್ಯ ರೈಲ್ವೆ ವಲಯ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಅಂತೆಯೇ ಪ್ರಯಾಣಿಕರ ಈ ನಡೆಗೆ ಕಾರಣವನ್ನು ಹುಡುಕಲಾಗುತ್ತಿದ್ದು, ಪ್ರಯಾಣಿಕರು ರೈಲಿನತ್ತ ಮುಖ ಮಾಡದೇ ಇರಲು ಇರುವ ಅಂಶಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

'ನಾವು ಶೀಘ್ರದಲ್ಲೇ ವಿಮಾನ ನಿಲ್ದಾಣ ಆಪರೇಟರ್ - ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಜೊತೆ ಮಾತುಕತೆ ನಡೆಸಲು ಯೋಜಿಸಿದ್ದೇವೆ.  ಅಂತೆಯೇ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತೂ ಚಿಂತನೆಯಲ್ಲಿ ತೊಡಗಿದ್ದು, 15 ನಿಮಿಷದಿಂದ ಅರ್ಧ ಘಂಟೆಗೆ ಬದಲಾಯಿಸಬಹುದು. ಇದರಿಂದ ವಿಮಾನ ನಿಲ್ದಾಣದ ನೌಕರರು ಮತ್ತು ವಿಮಾನ ಪ್ರಯಾಣಿಕರು ಈ ರೈಲುಗಳನ್ನು ಬಳಸಿಕೊಳ್ಳ ಬಹುದು. ಪ್ರಸ್ತುತ, ವಿಮಾನ ಪ್ರಯಾಣಿಕರು ಮಾತ್ರ ಬಳಕೆ ಮಾಡುವಂತೆ ರೈಲುಗಳ ಸಮಯ ನಿಗದಿ ಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂತೆಯೇ ಪ್ರಯಾಣಿಕರು ತಮ್ಮ ಸಾಮಾನುಗಳ ನಿರ್ವಹಣೆಯಿಂದಾಗಿ ಟ್ಯಾಕ್ಸಿ ಅಥವಾ ಸ್ವಂತ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದೂ ಕೂಡ ರೈಲಿಗೆ ಪ್ರಯಾಣಿಕರ ಕೊರೆತೆಗೆ ಕಾರಣ ಎಂದು ಹೇಳಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ಕೆ ವರ್ಮಾ ಅವರು ಮಾತನಾಡಿ, ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲುಗಳನ್ನು ಓಡಿಸುವ ಯೋಜನೆಯನ್ನು ಕೈ ಬಿಡಲಾಗಿದೆ. ಹೆಚ್ಚಿನ ಜನರು ಪ್ರಯಾಣಿಸದ ಹೊರತು ನಾವು ಹೆಚ್ಚಿನ ರೈಲುಗಳನ್ನು ನಿಯೋಜನೆ ಮಾಡಲು ಸಾಧ್ಯವಿಲ್ಲ. ಕಾಲಕ್ರಮೇಣ ಪರಿಸ್ಥಿತಿ ಅವಲೋಕಿಸಿ ರೈಲು ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು. 
 


Stay up to date on all the latest ರಾಜ್ಯ news
Poll
Omicron

ಮಾಲ್‌ಗಳು/ಥಿಯೇಟರ್‌ಗಳಿಗೆ ಭೇಟಿ ನೀಡಲು ಎರಡು ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದು ಸರಿಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp