ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ಆರೋಪ: ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್ಐಆರ್

ರಾಜ್ಯ ಕಾಂಗ್ರೆಸ್'ನ ರಾಜಭವನ ಚಲೋ ಪ್ರತಿಭಟನೆ ವೇಳೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆ ಮೇಲೆ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Published: 22nd January 2021 08:26 PM  |   Last Updated: 22nd January 2021 08:26 PM   |  A+A-


Sowmya Reddy

ಸೌಮ್ಯಾ ರೆಡ್ಡಿ

Posted By : Vishwanath S
Source : Online Desk

ಬೆಂಗಳೂರು: ರಾಜ್ಯ ಕಾಂಗ್ರೆಸ್'ನ ರಾಜಭವನ ಚಲೋ ಪ್ರತಿಭಟನೆ ವೇಳೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆ ಮೇಲೆ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಎಸಿ ಸೆಕ್ಷನ್ 323, 353ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಫ್ರೀಡಂ ಪಾರ್ಕ್​ನಿಂದ ರಾಜಭವನದವರೆಗೆ ಕಾಂಗ್ರೆಸ್​ ನಾಯಕರು ಪ್ರತಿಭಟನೆ ಹೊರಟಿದ್ದರು. ಈ ವೇಳೆ ಅವರನ್ನು ಮಹಾರಾಣಿ ಕಾಲೇಜು ಬಳಿ ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಸ್ಥಳದಲ್ಲಿದ್ದ ಸೌಮ್ಯಾ ರೆಡ್ಡಿಯವರನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ, ಸೌಮ್ಯಾ ರೆಡ್ಡಿ ಮಹಿಳಾ ಪೇದೆಯೊಬ್ಬರಿಗೆ ಹೂ ದಿ ಹೆಲ್ ಆರ್ ಯು ಎಂದು ನಿಂದಿಸುತ್ತಾ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ವೈರಲ್ ಆಗಿದ್ದರಿಂದ ಸೌಮ್ಯಾ ರೆಡ್ಡಿಯವರು ಸಾರ್ವಜನಿಕರ ಟೀಕೆಗೂ ಗುರಿಯಾದರು. ಆದರೆ, ಸೌಮ್ಯಾ ರೆಡ್ಡಿ ಈ ಘಟನೆ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ತಮ್ಮ ಮೇಲೆ ಮಹಿಳಾ ಪೇದೆಯೇ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು.

ಈ ನಡುವೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಸೌಮ್ಯಾ ರೆಡ್ಡಿಯವರು, ಪೊಲೀಸರು ನಮ್ಮನ್ನು 20 ನಿಮಿಷಕ್ಕೂ ಹೆಚ್ಚು ಕಾಲ ತಳ್ಳಾಡುತ್ತಿದ್ದರು. ನಾವೇನೋ ಕ್ರಿಮಿನಲ್ ಗಳಂತೆ ನೋಡುತ್ತಿದ್ದರು. ತಳ್ಳಾಟದಲ್ಲಿ ನನ್ನ ಕತ್ತು ಹಾಗೂ ಭುಜಗಳ ಮೇಲೆ ಗಾಯಗಳಾಗಿವೆ. ಸಾಕಷ್ಟು ಹಲ್ಲೆಗಳೂ ನನ್ನ ಮೇಲೆ ನಡೆದಿದೆ. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪುತ್ತಿದ್ದೆ. ಹೀಗಾಗಿ ನೀರಿಗಾಗಿ ಹತ್ತಿರದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷರ ಬಳಿ ತೆರಳಲು ಯತ್ನಿಸಿದ್ದೆ. ಈ ವೇಳೆ ಮಹಿಳಾ ಪೇದೆ ನನ್ನನ್ನು ವಶಕ್ಕೆ ಪಡೆಯಲು ಮುಂದಾದರು. ಕೈಬಿಡುವಂತೆ ತಿಳಿಸಿದ್ದೆ. ಅದು ಸಾಮಾನ್ಯ ವರ್ತನೆಯಾಗಿತ್ತು ಎಂದು ಹೇಳಿದ್ದರು.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp