ಅಂತರ್ ರಾಜ್ಯ ಕಳ್ಳರಿಂದ ಒಂದೂವರೆ ಕೆಜಿ ಚಿನ್ನ ಜಪ್ತಿ ಮಾಡಿದ ಸಿಸಿಬಿ ಪೊಲೀಸರು
ಇತ್ತೀಚೆಗೆ ಸೆರೆಯಾಗಿದ್ದ ಉತ್ತರಪ್ರದೇಶ ಮೂಲಕ ಇಬ್ಬರು ಕುಖ್ಯಾತ ಅಂತರಾಜ್ಯ ಕಳ್ಳರ ವಿರುದ್ಧ ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು ಮತ್ತೆ ರೂ.75 ಲಕ್ಷ ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
Published: 23rd January 2021 10:43 AM | Last Updated: 23rd January 2021 12:50 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇತ್ತೀಚೆಗೆ ಸೆರೆಯಾಗಿದ್ದ ಉತ್ತರಪ್ರದೇಶ ಮೂಲಕ ಇಬ್ಬರು ಕುಖ್ಯಾತ ಅಂತರಾಜ್ಯ ಕಳ್ಳರ ವಿರುದ್ಧ ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು ಮತ್ತೆ ರೂ.75 ಲಕ್ಷ ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ ಹಾಗೂ ಮುರಸಲೀಂ ಮೊಹಮ್ಮದ್ ಅಲಿಯಾಸ್ ಸಲೀಂ ಬಂಧಿತರಾಗಿದ್ದರು.
ಈ ಮೊದಲು ಆರೋಪಿಗಳಿಂದ ನಾಲ್ಕು ಕೆ.ಜಿ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಯಿತು. ಆರೋಪಿಗಳ ತವರೂರು ಉತ್ತರಪ್ರದೇಶದ ಚಂದೋಸಿ ಗ್ರಾಮಕ್ಕೆ ಕರೆದೊಯ್ತು ಕದ್ದ ಚಿನ್ನಕ್ಕೆ ಹುಡುಕಾಟ ನಡೆಸಲಾಯಿತು. ಐದು ದಿನಗಳ ಸತತ ಪರಿಶೀಲನೆ ಬಳಿಕ ಒಂದುವರೆ ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.