
ಆರೋಪಿ ಯುವರಾಜ್
ಬೆಂಗಳೂರು: ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಹೊತ್ತಿರುವ ಯುವರಾಜ್ ಆಸ್ತಿ ಜಪ್ತಿಗೆ ಬೆಂಗಳೂರಿನ ಸಿಸಿಹೆಚ್ 67ನೇ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.
ದಕ್ಷಿಣ, ಬೆಂಗಳೂರು ಉತ್ತರ, ಹಾಸನ, ಮದ್ದೂರು, ದ್ವಾರ ಕೊತ್ತನಹಳ್ಳಿಯಲ್ಲಿ ನಿವೇಶನ, ಮನೆಗಳು, ಜಮೀನು ಸೇರಿ ಒಟ್ಟು 26 ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿದೆ. ಹೀಗಾಗಿ, ಯುವರಾಜ್ಗೆ ಸೇರಿದ ಸುಮಾರು 80 ರಿಂದ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಆಗಲಿದೆ. ಯುವರಾಜ್ ಜೊತೆ ಆತನ ಪತ್ನಿ ಆಸ್ತಿ ಕೂಡ ಜಪ್ತಿ ಆಗಲಿದೆ ಎಂದು ಹೇಳಲಾಗುತ್ತಿದೆ.
ಆರೋಪಿ ರಾಜ್ಯಪಾಲರ ಹುದ್ದೆ, ಸರ್ಕಾರಿ ನೌಕರಿ, ಮೆಡಿಕಲ್ ಸೀಟ್, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಕೊಡಿಸುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಪಡೆದು ವಂಚನೆ ಮಾಡಿದ್ದು, ಈತನ ವಿರುದ್ಧ ಹೈಗ್ರೌಂಡ್ಸ್, ಸದಾಶಿವನಗರ, ಉಪ್ಪಾರಪೇಟೆ, ವಿಲ್ಸನ್ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿದವೆ. ಆರೋಪ ಸಂಬಂಧ ಸಿಸಿಬಿ ಪೊಲೀಸರು ಆರೋಪಿ ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.