ತುಮಕೂರಿನ ಅಧಿಕಾರಿಗಳ 'ನಕಲಿ ಲಸಿಕೆ ವಿಡಿಯೊ' ವಿವಾದ: ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದೇನು?

ತುಮಕೂರಿನಲ್ಲಿ ಇಬ್ಬರು ಆರೋಗ್ಯಾಧಿಕಾರಿಗಳಿಗೆ ಲಸಿಕೆ ನೀಡುವ ರೀತಿಯಲ್ಲಿ ಕ್ಯಾಮರಾ ಎದುರು ನಕಲಿ ಫೋಸ್ ನೀಡಲಾಗಿದೆ ಎಂಬ ವಿಡಿಯೊ ವೈರಲ್ ಆಗಿರುವುದರ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

Published: 23rd January 2021 12:11 PM  |   Last Updated: 23rd January 2021 12:52 PM   |  A+A-


Tumkur health officers posed for the photographs

ಲಸಿಕೆ ಹಾಕಿಸಿಕೊಳ್ಳುವ ಫೋಟೋಗೆ ಫೋಸ್ ಕೊಟ್ಟ ಅಧಿಕಾರಿಗಳು

Posted By : Sumana Upadhyaya
Source : Online Desk

ಬೆಂಗಳೂರು:ತುಮಕೂರಿನಲ್ಲಿ ಇಬ್ಬರು ಆರೋಗ್ಯಾಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳುವ ರೀತಿಯಲ್ಲಿ ಕ್ಯಾಮರಾ ಎದುರು ನಕಲಿ ಫೋಸ್ ನೀಡಲಾಗಿದೆ ಎಂಬ ಆರೋಪದ ವಿಡಿಯೊ ವೈರಲ್ ಆಗಿರುವುದರ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ತುಮಕೂರಿನಲ್ಲಿನ ಆರೋಗ್ಯಾಧಿಕಾರಿಗಳು ಅದಾಗಲೇ ಲಸಿಕೆ ಪಡೆದಿದ್ದರು. ನಂತರ ಫೋಟೋಗ್ರಾಫರ್ ಗಳು ಕೇಳಿದ್ದಕ್ಕೆ ಫೋಸ್ ನೀಡಿದ್ದರಷ್ಟೆ. ಈ ವಿಷಯವನ್ನು ಅನಗತ್ಯವಾಗಿ ವೈಭವೀಕರಿಸುವ ಅಗತ್ಯವಿಲ್ಲ. ಇಲ್ಲಿ ನಕಲಿ ಮಾಡಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಲಸಿಕೆಯನ್ನು ತೆಗೆದುಕೊಳ್ಳುವ ರೀತಿಯಲ್ಲಿ ಆರೋಗ್ಯಾಧಿಕಾರಿಗಳು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ ಎಂದು ಹೇಳುವ 43 ಸೆಕೆಂಡ್ ಗಳ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ಕೆಲ ದಿನಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಹಲವರು ಶೇರ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.

ಇದೇನು ನಕಲಿ ಲಸಿಕಾ ಅಭಿಯಾನವೇ, ಆರೋಗ್ಯಾಧಿಕಾರಿಗಳೇ ಲಸಿಕೆ ಪಡೆಯಲು ಏಕೆ ಹಿಂಜರಿಯುತ್ತಿದ್ದಾರೆ, ಇದಕ್ಕೆ ರಾಜ್ಯ ಸರ್ಕಾರ, ಮೋದಿಯವರು ಉತ್ತರಿಸಿ ಎಂದು ಕಾಂಗ್ರೆಸ್ ನಾಯಕ ಸಲಾಮ್ ನಿಜಮಿ ಕೇಳಿದ್ದರು.

ವಿಡಿಯೊದಲ್ಲಿ ಇರುವವರು ಡಾ ರಜನಿ ಎಂ ಮತ್ತು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ. ಅವರಿಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಅದಾಗಲೇ ಲಸಿಕೆ ಪಡೆದಿದ್ದೆವು, ನಂತರ ಮಾಧ್ಯಮಗಳ ಫೋಟೋಗ್ರಾಫರ್ ಗಳು ಬಂದು ಕೇಳಿದರೆಂದು ಕ್ಯಾಮರಾಗೆ ಫೋಸ್ ನೀಡಿದ್ದೆವಷ್ಟೆ ಎಂದಿದ್ದಾರೆ. ಡಾ ರಜನಿಯವರು ಪ್ರತಿಕ್ರಿಯೆ ನೀಡಿ, ನಾನು ಜನವರಿ 16ರಂದೇ ಕೋವಿನ್ ಲಸಿಕೆ ಪಡೆದಿದ್ದೆ. ಕೆಲವು ಮಾಧ್ಯಮದ ಫೋಟೋಗ್ರಾಫರ್ ಗಳು ಬಂದು ಲಸಿಕೆ ತೆಗೆದುಕೊಳ್ಳುವಂತೆ ಫೋಸ್ ಕೊಡಿ ಎಂದು ನಂತರ ಬಂದು ಕೇಳಿದರು. ಅದಕ್ಕೆ ಕುರ್ಚಿಯಲ್ಲಿ ಕುಳಿತು ಫೋಸ್ ಕೊಟ್ಟೆ. ಅನಗತ್ಯವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗಿದ್ದು ನೋಡಿ ಬೇಸರವಾಯಿತು. ಜನರು ಸುಳ್ಳುಸುದ್ದಿ ಹಬ್ಬಿಸಬಾರದು, ಉತ್ತಮ ಸಂದೇಶಗಳನ್ನು ಹಂಚಿಕೊಳ್ಳಬೇಕು ಎಂದರು.

ನಮ್ಮ ಲಸಿಕೆ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರು ಹೋಗುವ ಆತುರದಲ್ಲಿದ್ದರು. ಹೀಗಾಗಿ ನಾವು ಕೆಲವು ಫೋಟೋಗಳಿಗೆ ಫೋಸ್ ಕೊಡಲು ನಿರ್ಧರಿಸಿದೆವು, ಅದನ್ನು ಯಾರೋ ತಪ್ಪಾಗಿ ವಿಡಿಯೊ ಮಾಡಿಕೊಂಡು ಆನ್ ಲೈನ್ ನಲ್ಲಿ ಹಂಚಿಕೊಂಡು ಸುಳ್ಳುಸುದ್ದಿ ಹಬ್ಬಿಸಿದ್ದಾರೆ ಎಂದು ನಾಗೇಂದ್ರಪ್ಪ ಹೇಳುತ್ತಾರೆ.  

ನಿನ್ನೆಯ ಹೊತ್ತಿಗೆ ಕರ್ನಾಟಕದಲ್ಲಿ 1 ಲಕ್ಷದ 38 ಸಾವಿರದ 656 ಮಂದಿಗೆ ಲಸಿಕೆ ಹಾಕಲಾಗಿದೆ. ಕೆಲವರಿಗೆ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಅಭಿಯಾನದ ವಿವರ ಹಂಚಿಕೊಂಡ ಡಾ ಸುಧಾಕರ್, ಕೋವಿಶೀಲ್ಡ್ ಅನ್ನು 1,36,882 ಮತ್ತು ಕೋವಾಕ್ಸಿನ್ ಅನ್ನು 1,774 ಜನರಿಗೆ ನೀಡಲಾಗಿದೆ. ಕೇವಲ ಶೇಕಡಾ 2 ರಿಂದ 3.5 ರಷ್ಟು ಮಂದಿಗೆ ಅಡ್ಡ ಪರಿಣಾಮ ಉಂಟಾಗಿದೆ. ಮೊದಲ ಹಂತದಲ್ಲಿ 3,27,201 ಸರ್ಕಾರ ಮತ್ತು 4,45,389 ಖಾಸಗಿ ಆರೋಗ್ಯ ವಲಯ ಸಿಬ್ಬಂದಿ ಸೇರಿದಂತೆ ಒಟ್ಟು 8,47,908 ಲಕ್ಷ ಜನರು ಲಸಿಕೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದರು.

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp