ಹಿರಿಯ ಆರ್.ಎಸ್.ಎಸ್. ಮುಖಂಡ ಬಾಬುರಾವ್ ದೇಸಾಯಿ ವಿಧಿವಶ: ಸಂಸದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬುರಾವ್ ದೇಸಾಯಿ (97) ಅವರು ವಿಧಿವಶರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ನ ಹಿರಿಯ ಪ್ರಚಾರಕರೂ ಆಗಿದ್ದ ದೇಸಾಯಿಯವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Published: 23rd January 2021 11:32 AM  |   Last Updated: 23rd January 2021 12:51 PM   |  A+A-


ಬಾಬುರಾವ್ ದೇಸಾಯಿ

Posted By : Raghavendra Adiga
Source : Online Desk

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬುರಾವ್ ದೇಸಾಯಿ (97) ಅವರು ವಿಧಿವಶರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ನ ಹಿರಿಯ ಪ್ರಚಾರಕರೂ ಆಗಿದ್ದ ದೇಸಾಯಿಯವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

1942ಕ್ಕೆ ಸಂಘ ಪರಿವಾರದ ಪ್ರಚಾರಕರಾಗಿ ಸೇರ್ಪಡೆಯಾಗಿದ್ದ ಬಾಬುರಾವ್ 1949ರಲ್ಲಿ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡದ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ಧಾರವಾಡ, ಕಲಬುರಗಿ, ಬಳ್ಳಾರಿ ವಿಭಾಗ ಪ್ರಚಾರಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿ ಆಗಿ ನೆಮಕವಾಗಿದ್ದರು.

ಹಿರಿಯ ಮುಖಂಡರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

"ಸಂಘದ ಹಿರಿಯ ಪ್ರಚಾರಕರು, ನನ್ನ ಆತ್ಮೀಯ ಮಾರ್ಗದರ್ಶಕರು, ಹಿಂದೂ ಸಂಘಟನೆಗಳಿಗೆ ತಪಸ್ವಿಯಂತೆ ಸೇವೆ ಸಲ್ಲಿಸಿದ ವಿ.ಎಚ್.ಪಿ ಯ ರಾಷ್ಟ್ರೀಯ ಪದಾಧಿಕಾರಿಗಳು ಆಗಿದ್ದ ಮಾನ್ಯ ಶ್ರೀ ಬಾಬು ರಾವ್ ದೇಸಾಯಿ ಅವರು ನಿಧನರಾದ ಸುದ್ದಿ ಕೇಳಿ ಅತೀವ ಸಂತಾಪವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ಸಂಸದರು ಟ್ವೀಟ್ ಮಾಡಿದ್ದಾರೆ.

"ಏಳು ದಶಕಗಳಿಂದ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ಬಾಬುರಾವ್ ದೇಸಾಯಿ ನಿಧನರಾದ ಸುದ್ಧಿ ಅತೀವ ದುಃಖವನ್ನುಂಟುಮಾಡಿದೆ. ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಮ ಜನ್ಮಭೂಮಿ ಆಂದೋಲನ ಸೇರಿದಂತೆ ಅನೇಕ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರಿಗೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ." ಎಂದು ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ ಟ್ವೀಟ್ ಮಾಡಿ ಶೋಕ ಸಂದೇಶ ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp