ದ್ವಿತೀಯ ಪಿಯುಸಿ ಪರೀಕ್ಷೆಗೆ ಶೇ.75 ರಷ್ಟು ಹಾಜರಾತಿ ಕಡ್ಡಾಯವಿಲ್ಲ

ಈ ವರ್ಷ ಪರೀಕ್ಷೆಗಳಿಗೆ ಹಾಜರಾಗುವ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ತರಗತಿ ಹಾಜರಾತಿ ನಿಯಮಗಳನ್ನು ಸಡಿಲಿಸಲು ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆ ನಿರ್ಧರಿಸಿದೆ

Published: 24th January 2021 09:37 AM  |   Last Updated: 24th January 2021 09:37 AM   |  A+A-


representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಈ ವರ್ಷ ಪರೀಕ್ಷೆಗಳಿಗೆ ಹಾಜರಾಗುವ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ತರಗತಿ ಹಾಜರಾತಿ ನಿಯಮಗಳನ್ನು ಸಡಿಲಿಸಲು ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಅಲ್ಲದೆ, ದ್ವಿತೀಯ ಪಿಯು ಕಾಲೇಜುಗಳು ಮತ್ತೆ ತೆರೆದಿದ್ದರೂ ಸಹ, ವೈರಸ್ ಹರಡಬಹುದೆಂಬ ಭಯದಿಂದ ಇನ್ನೂ ಅನೇಕರು ಆಫ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿಲ್ಲ, ಆದ್ದರಿಂದ ಈ ಶೈಕ್ಷಣಿಕ ವರ್ಷದ ನಿಯಮಗಳನ್ನು ಸಡಿಲಿಸಲು ಮಂಡಳಿ ತೀರ್ಮಾನಿಸಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ 2006 ರ ಪ್ರಕಾರ, ಪಿಯುಸಿ, ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕೋರ್ಸ್‌ಗೆ ಅಂತಿಮ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆಯಲು, ವಿದ್ಯಾರ್ಥಿಗಳು 75 ಪ್ರತಿಶತದಷ್ಟು ಹಾಜರಾತಿಯನ್ನು ಹೊಂದಿರಬೇಕು, ಅದು ವಿಫಲವಾದರೆ, ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಕೋರ್ಸ್‌ಗೆ ಸೇರಬೇಕು ಎಂಬ ನಿಯಯಮವಿತ್ತು. ಆದರೆ ಈ ವರ್ಷ ನಿಯಮ ಸಡಿಲಿಸಲಾಗಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳು ಹಾಜರಾತಿ ಕೊರತೆಯ ಹೊರತಾಗಿಯೂ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡುವಂತೆ ಪಿಯು ಅಧಿಕಾರಿಗಳಿಗ ಇಲಾಖೆ ತಿಳಿಸಿದೆ.

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp