
ಧಾರವಾಡ ಅಪಘಾತ
ಧಾರವಾಡ: ಧಾರವಾಡದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಧಾರವಾಡದ ಇಟಿಗಟ್ಟಿ ಬಳಿ ಜನವರಿ 15ರಂದು ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆ ಮೂಲಕ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
Death toll in #DharwasMishap mounts to 12 with 47-yrs old injured woman succumbs in #Bengaluru hospital @santwana99 @ramupatil_TNIE @XpressBengaluru @HiremathTnie @HubliCityeGroup @hublimandi @Hubballi_Infra @hubballi_meme @karnatakacom @Namma_Dharwad @Namma_HD @NammaBengaluroo pic.twitter.com/AMdtZ02N4i
— Amit Upadhye (@Amitsen_TNIE) January 24, 2021
ದಾವಣಗೆರೆಯಿಂದ ಗೆಳತಿಯರ ಜೊತೆ ಗೋವಾಗೆ ಪ್ರವಾಸಕ್ಕೆ ತೆರಳುವ ವೇಳೆ ಧಾರವಾಡ ಬಳಿ ಜನವರಿ 15ರಂದು ಬೆಳಗ್ಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ವೇದಾ ಮಂಜುನಾಥ್ (47) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಅಪಘಾತದ ನಡೆದ ದಿನ ಸ್ಥಳದಲ್ಲೇ 11 ಮಂದಿ ಮೃತಪಟ್ಟಿದ್ದರು. 5 ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಮಹಿಳೆಯರಲ್ಲಿ ಶಿವಮೊಗ್ಗ ಮೂಲದ ವೇದಾ ಮಂಜುನಾಥ್ ಸಹ ಒಬ್ಬರಾಗಿದ್ದರು. ಗಾಯಗೊಂಡ ವೇದಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವೇದಾ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಅಪಘಾತ ಪ್ರಕರಣದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಅಂಗಾಂಗ ದಾನ
ವೇದಾ ಮಂಜುನಾಥ್ ಅವರ ಕುಟುಂಬ ಸಾವಿನ ದುಃಖದಲ್ಲಿ ಸಾರ್ಥಕತೆ ಮೆರೆದಿದೆ. ವೇದಾ ಅವರ ಇಚ್ಚೆಯಂತೆ ಎರಡು ಕಿಡ್ನಿ ಹಾಗೂ ಯಕೃತ್ ದಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.