
ಸಾಂದರ್ಭಿಕ ಚಿತ್ರ
ಬೆಂಗಳೂರು: ಪೊಲೀಸ್ ಮಾಹಿತಿದಾರನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಗೋಪಾಲನಗರ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿದಾರ ಶ್ರೀನಿವಾಸ್ ಅಲಿಯಾಸ್ ಕರಿಯ ಸೀನ ಎಂಬಾತನನ್ನು ಜನವರಿ 9ರಂದು ಹತ್ಯೆ ಮಾಡಲಾಗಿತ್ತು,ಕೊಲೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದರು.
ಲಗ್ಗೆರೆ ಕಸ್ತೂರಿ ನಗರದ ಅಭಿಷೇಕ್, ರಘುವರನ್, ಪ್ರವೀಣ್,ಮನೋಜ್ ಕುಮಾರ್ ಬಂಧಿತ ಆರೋಪಿಗಳು, ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ನಿರ್ಮಾಣ ಹಂತತ ಕಟ್ಟಡದಲ್ಲಿ ಸೀನನನ್ನು ಕೊಲೆ ಮಾಡಿದ ಆರೋಪಿಗಳು ನಂತರ ತಮಿಳುನಾಡಿಗೆ ಪರಾರಿಯಾಗಿದ್ದರು. ನಂತರ ಅಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಈ ನಾಲ್ವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸೀನನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.